Home » ಲೈವ್ ನ್ಯೂಸ್ » PG ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ.

PG ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ.

ಮಂಗಳೂರು.29.ಜುಲೈ.26: ಮಂಗಳೂರು ವಿಶ್ವವಿದ್ಯಾನಿಲಯವು ೨೦೨೬-೨೭ನೇ ಸಾಲಿನ ಘಟಕ ಕಾಲೇಜುಗಳು ಮತ್ತು ಸ್ನಾತಕೋತ್ತರ ವಿಭಾಗಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆಗಳನ್ನು ಹೊರಡಿಸಿದೆ.

ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. ೫೫ ಅಂಕಗಳೊಂದಿಗೆ ಯುಜಿಸಿ (UGC), ನೆಟ್ (NET), ಕೆ-ಸೆಟ್ (K-SET) ಅಥವಾ ಪಿಎಚ್‌ಡಿ (Ph.D) ಪೂರೈಸಿದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಆಯ್ಕೆಯು ಸಂದರ್ಶನ ಮತ್ತು ಅಕಾಡೆಮಿಕ್ ಅಂಕಗಳ ಆಧಾರದ ಮೇಲೆ ನಡೆಯುತ್ತದೆ. ವಿವಿಧ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಮಂಗಳೂರು ವಿಶ್ವವಿದ್ಯಾನಿಲಯ ಅರ್ಜಿ ಆಹ್ವಾನಿಸಿದೆ.

ಕನ್ನಡ, ಇಂಗ್ಲಿಷ್, ಇತಿಹಾಸ, ಆರ್ಥಿಕ ವಿಜ್ಞಾನ, ರಾಜ್ಯವಿಜ್ಞಾನ, ಸಮಾಜವಿಜ್ಞಾನ, ಸಾಮಾಜಿಕ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜಿಯೋಗ್ರಫಿ, ಲೈಬ್ರೆರಿ ಆಯಂಡ್ ಇನ್ಫಾರ್ಮೇಷನ್ ಸೈನ್ಸ್, 

ಬಯೋಕೆಮಿಸ್ಟ್ರಿ, ಮೆಡಿಕಲ್ ಫಿಸಿಕ್ಸ್, ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ, ಪರಿಸರ ವಿಜ್ಞಾನ, ಇಲೆಕ್ಟ್ರಾನಿಕ್ಸ್, ಮೆಟೀರಿಯಲ್ ಸೈನ್ಸ್, ಪಿ.ಜಿ ಡಿಪ್ಲೊಮಾ ಇನ್ ಮೆಟೀರಿಯಲ್ ಸೈನ್ಸ್, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಸೈಬರ್ ಭದ್ರತೆ, ಫುಡ್ ಸೈನ್ಸ್ ಆಯಂಡ್ ನ್ಯೂಟ್ರಿಷಿಯನ್, ಬಯೊಟೆಕ್ನಾಲಜಿ, ಹ್ಯೂಮನ್ ಕಾನ್ಶಿಯಸ್‌ನೆಸ್ ಆಯಂಡ್ ಯೋಗಿಕ್ ಸೈನ್ಸಸ್, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಗಣಿತ, ಮೈಕ್ರೊಬಯಾಲಜಿ, ಕಂಪ್ಯೂಟರ್ ಸೈನ್ಸ್, ಎಂಸಿಎ, ಎಂಪಿಇಡಿ, ಬಿಪಿಇಡಿ, ಎಂಬಿಎ (ಟೂರಿಸಂ), ಎಂಬಿಎ, ಸಂಖ್ಯಾವಿಜ್ಞಾನ, ಎಂಬಿಎ (ಐಬಿ), ಎಂಇಡಿ, ಕಾಮರ್ಸ್ ಸ್ನಾತಕೋತ್ತರ ವಿಷಯಗಳಲ್ಲಿ ಉಪನ್ಯಾಸಕರ ಅಗತ್ಯ ಇದೆ.

ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 55 ಅಂಕ ಹೊಂದಿರುವ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇ 50 ಅಂಕ) ಅಭ್ಯರ್ಥಿಗಳು ವೆಬ್‍ಸೈಟ್ ಮೂಲಕ ಆಗಸ್ಟ್ 1ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

Author

ಪ್ರಮುಖ ಸುದ್ದಿ

Stock market

Astrology