|

ಔರಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ:    

ಔರಾದ.06.ಜೂನ್.25:- ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಆರೋಗ್ಯ ಜಾಗೃತಿ ಕಾರ್ಯಕ್ರಮ ಜರುಗಿತ್ತು . ಮುಂಗಾರು ಮಳೆಯು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಹೆಚ್ಚು ಗಮನಕೊಡುವುದು ಅವಶ್ಯಕ ಡೆಂಗ್ಯು, ಮಲೇರಿಯಾ, ಕಾಲರಾಗಳಂತಹ ರೋಗಗಳು ಹರಡುವ ಸಾದ್ಯತೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾವು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದರ ಮುಲಕ ರೊಗಾಣುಗಳು ಹರಡದಂತೆ ಎಚ್ಚರವಹಿಸುವುದು ಅತ್ಯಂತ ಅವಶ್ಯಕ ಎಂದು ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿಗಳಾದ ಶ್ರೀ ದೇವಿದಾಸ ಸರ್  ನುಡಿದರು.

  ಕ್ಷೇತ್ರ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಮತಿ ಅನೀತಾ ಮೇಡಂ ಮಾತನಾಡುತ್ತಾ ವಿದ್ಯಾರ್ಥಿಗಳು ತಾವು ವಾಸಿಸುವ ಪ್ರದೇಶದಲ್ಲಿ ತಮ್ಮ ಮನೆಯ ಮತ್ತು  ಸುತ್ತಲಿನ ಪರಿಸರ ಸುವ್ಯವಸ್ಥಿತವಾಗಿ ಇಟ್ಟಿಕೊಳ್ಳುವುದರ ಬಗ್ಗೆ ಅನೇಕರಿಗೆ ಮಾರ್ಗದರ್ಶನ ಮಾಡಲು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಂಬಿಕಾದೇವಿ ಕೊತಮೀರ್ ಮಾತನಾಡಿ ಆರೋಗ್ಯವೆ ಭಾಗ್ಯ ಎಂಬ ಹೇಳಿಕೆಯನ್ನು ಉಚ್ಚರಿಸುತ್ತಾ, ವಿದ್ಯಾರ್ಥಿಗಳು ಸಮಾಜದಲ್ಲಿ ಆರೋಗ್ಯಕರ ವಾತಾವರಣದ ನಿರ್ಮಾಣದಲ್ಲಿ ಪಾತ್ರನಿರ್ವಹಣೆ ಅಗತ್ಯ ಎಂದು ನುಡಿದರು.

ಕಾಲೇಜಿನ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪದ್ಮಾಂಜಲಿ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಅಂಬಿಕಾ   ವಂದಿಸಿದರು, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ವಿನಾಯಕ ಕೊತಮೀರ್ ನಿರುಪಿಸುದರು ಕಾರ್ಯಕ್ರಮದಲ್ಲಿ ಕ್ಷೇತ್ರ ನಿರೀಕ್ಷಣಾದಿಕಾರಿಗಳಾದ ಶ್ರೀ ಮೊಹಿಯುದ್ದಿನ್ ಸರ್, ಶ್ರೀ ಮಹಂತೇಶಸರ್, ಶ್ರೀ ಸಂಗಮೇಶ ರೆಡ್ಡಿ , ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು.

Similar Posts

Leave a Reply

Your email address will not be published. Required fields are marked *