ರಾಜ್ಯದಲ್ಲಿ ಪ್ರಸಕ್ತ ವರ್ಷ ಏಪ್ರಿಲ್‌ನಿಂದ ಈವರೆಗೆ ರಾಜ್ಯದಲ್ಲಿ 21,99,202 ಜನರಿಗೆ ಪರೀಕ್ಷೆ ನಡೆದಿದ್ದು, 6,751 ಜನರಿಗೆ ಎಚ್‌ಐವಿ ಇರುವುದು ಪತ್ತೆಯಾಗಿದೆ.
ಇದರ ಪ್ರಮಾಣ ಶೇ 0.31. ಬಾಗಲಕೋಟೆ ಜಿಲ್ಲೆಯಲ್ಲಿ 56,541 ಜನರಿಗೆ ತಪಾಸಣೆ ಆಗಿದ್ದು, 385 ಜನರಲ್ಲಿ ಸೋಂಕು (ಶೇ 0.68) ಇರುವುದು ದೃಢಪಟ್ಟಿದೆ.
ರಾಜ್ಯದಲ್ಲಿ 7,22,857 ಗರ್ಭಿಣಿಯರ ತಪಾಸಣೆ ನಡೆಸಿದ್ದು, 269 ಜನರಲ್ಲಿ ಎಚ್‌ಐವಿ ಇರುವುದು ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 30,001 ಗರ್ಭಿಣಿಯರ ತಪಾಸಣೆ ನಡೆಸಿದ್ದು, 13 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
2004ರಿಂದ ಇಲ್ಲಿಯವರೆಗೆ ರಾಜ್ಯದ ವಿವಿಧ ಆಯಂಟಿ ರೆಟ್ರೊ ವೈರಲ್‌ಥೆರಪಿ (ಎಆರ್‌ಟಿ) ಕೇಂದ್ರಗಳಲ್ಲಿ 4,09,321 ಜನರು ಚಿಕಿತ್ಸೆಗೆ ನೋಂದಾಯಿಸಿಕೊಂಡಿದ್ದಾರೆ. 1,97,844 ಜನರು ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 1,16,200 ಜನರು ಮರಣ ಹೊಂದಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ 2003-04ರಲ್ಲಿ 2,611 ಜನರ ತಪಾಸಣೆ ಮಾಡಿದಾಗ 1,069 ಜನರಿಗೆ ಎಚ್‌ಐವಿ ಇರುವುದು ಪತ್ತೆಯಾಗಿತ್ತು. ಸೋಂಕಿತರ ಪ್ರಮಾಣ ಶೇ 40.9ರಷ್ಟಿತ್ತು. 2011-12ರಲ್ಲಿ ಶೇ 10.6ಕ್ಕೆ ಇಳಿಯಿತು. ಜಾಗೃತಿ ಪರಿಣಾಮ ವರ್ಷದಿಂದ ವರ್ಷಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.
ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಸಾಮಾನ್ಯ ಜನರಲ್ಲಿ, ಇನ್ನೂ ಕೆಲವು ತಾಲ್ಲೂಕುಗಳ ಗರ್ಭಿಣಿಯರಲ್ಲಿ ಎಚ್‌ಐವಿ ಪತ್ತೆಯ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಿದೆ. ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸತತವಾಗಿ ಪ್ರಯತ್ನಿಸುತ್ತಲೇ ಇದೆ.
‘ಜಿಲ್ಲೆಯ ಪದವಿ ಕಾಲೇಜುಗಳಲ್ಲಿ 55 ರೆಡ್ ರಿಬ್ಬನ್ ಕ್ಲಬ್‍ಗಳನ್ನು ಸ್ಥಾಪಿಸಿ, ಜಾಗೃತಿ ಮೂಡಿಸಲಾಗುತ್ತಿದೆ. 260 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ 45 ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹದಿಹರೆಯದ ಆರೋಗ್ಯ ಶಿಕ್ಷಣ ತಿಳಿವಳಿಕೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೂ ಎಚ್‌ಐವಿ, ಏಡ್ಸ್ ನಿಯಂತ್ರಣ ಕುರಿತು ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುವರ್ಣಾ ಕುಲಕರ್ಣಿ ತಿಳಿಸಿದರು.
ಡಾ.ಸುವರ್ಣಾ ಕುಲಕರ್ಣಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ’ಎಚ್‍ಐವಿ ಏಡ್ಸ್ ಹರಡುವಿಕೆ ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ’ ಎಂಬುದು ಈ ವರ್ಷ ಏಡ್ಸ್ ದಿನದ ಘೋಷವಾಕ್ಯ. ಸೋಂಕು ನಿಯಂತ್ರಣಕ್ಕೆ ಎಲ್ಲ ಅಡೆತಡೆಗಳನ್ನು ದಾಟಿ ಮುಂದೆ ಸಾಗಬೇಕಿದೆ





Any questions related to World AIDS Day | ರಾಜ್ಯದಲ್ಲಿ ಎಚ್‌ಐವಿ: ಸೋಂಕಿತರ % ಪ್ರಮಾಣ ?