ಅನೇಕರು ಸೋಲೋ ಟ್ರಿಪ್ (Travel Solo) ಅಥವಾ ಏಕಾಂಗಿಯಾಗಿ ಪ್ರವಾಸ ಮಾಡೋದನ್ನು ಇಷ್ಟ ಪಡುತ್ತಾರೆ. ಇಂದು ಇದು ಪ್ರಪಂಚದಾದ್ಯಂತ ಜನಪ್ರಿಯ ಪ್ರವೃತ್ತಿಯಾಗಿ ಹೊರಹೊಮ್ಮುತ್ತಿದೆ. ಇದು ಹೊಸ ಸ್ಥಳಗಳನ್ನು ಅನ್ವೇಷಿಸಲು, ವಿಭಿನ್ನ ಸಂಸ್ಕೃತಿಗಳ (Different culture) ಜನರನ್ನು ಭೇಟಿ ಮಾಡಲು ಮತ್ತು ನೆಮ್ಮದಿಯಾಗಿ ವಿರಾಮ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.ಅಲ್ಲದೇ ಆತ್ಮಾವಲೋಕನ (Introspection) ಮತ್ತು ಸ್ವಯಂ ಬದಲಾವಣೆಗಾಗಿಯೂ ಏಕವ್ಯಕ್ತಿ ಪ್ರವಾಸವನ್ನು ಬಳಸಬಹುದು.
ಆದರೆ ಸೋಲೋ ಟ್ರಿಪ್‌ನಲ್ಲಿ ಎದ್ದು ಕಾಣುವ ಸಮಸ್ಯೆಯೆಂದರೆ ಅದು ಭದ್ರತೆ ಅಥವಾ ಸುರಕ್ಷತೆ. ಅದರಲ್ಲೂ ವಿಶೇಷವಾಗಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಸುರಕ್ಷತೆಯ ಸಮಸ್ಯೆ ಎದುರಾಗಬಹುದು. ಹೊಸ ಸ್ಥಳಕ್ಕೆ ಹೋಗುವ ಮೊದಲು ಸುರಕ್ಷತೆಯ ಬಗ್ಗೆ ಬಹಳಷ್ಟು ಪ್ರಶ್ನೆಗಳು ಉದ್ಭವಿಸುವುದು ಸಹಜ.
ಬನ್ನೇರುಘಟ್ಟ ಉದ್ಯಾನವನಕ್ಕೆ ಬರುವವರಿಗೆ ಬಿಗ್ಸರ್ಪೈಸ್
ನೀವು ಪ್ರಪಂಚವನ್ನು ನೋಡಬೇಕು, ವಿವಿಧ ದೇಶಗಳನ್ನು ಅನ್ವೇಷಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿದ್ದರೆ ಹಾಗೆಯೇ ನೀವು ಏಕಾಂಗಿಯಾಗಿ ಪ್ರಯಾಣಿಸಬೇಕೆಂಬ ಮಹಿಳೆಯಾಗಿದ್ದರೆ ಇಲ್ಲಿ 5 ಸುರಕ್ಷಿತ ದೇಶಗಳ ಪಟ್ಟಿಯನ್ನು ನೀಡಲಾಗಿದೆ.
1. ಕೆನಡಾ : ಕೆನಡಾದ ವಿಶಾಲವಾದ ಕಾಡು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಶ್ರೀಮಂತ ಸಂಸ್ಕೃತಿಯು ಪ್ರಪಂಚದಾದ್ಯಂತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದು ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಹಾಗೆಯೇ ತುಲನಾತ್ಮಕವಾಗಿ ಕಡಿಮೆ ಅಪರಾಧ ದರವನ್ನು ಹೊಂದಿದೆ. ನಯಾಗರಾ ಫಾಲ್ಸ್, ಬ್ಯಾನ್ಫ್ ರಾಷ್ಟ್ರೀಯ ಉದ್ಯಾನವನ, ಸ್ಟಾನ್ಲಿ ಪಾರ್ಕ್, ಸಿಎನ್ ಟವರ್ ಮುಂತಾದವು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
2. ಜೆಕ್ ರಿಪಬ್ಲಿಕ್ : ಯುರೋಪ್‌ನಲ್ಲಿರುವ ಜೆಕ್ ರಿಪಬ್ಲಿಕ್ ಏಕಾಂಗಿಯಾಗಿ ಪ್ರಯಾಣಿಸುವವರಿಗೆ ಸುರಕ್ಷಿತ ದೇಶವಾಗಿದೆ. ಜೆಕ್ ಗಣರಾಜ್ಯದ ರಾಜಧಾನಿ ಪ್ರೇಗ್ ವಿಶ್ವ ಪ್ರಸಿದ್ಧ ತಾಣವಾಗಿದೆ. ಇದು ಶ್ರೀಮಂತ ವಾಸ್ತುಶಿಲ್ಪ, ಸಾಂಸ್ಕೃತಿಕ ಪರಂಪರೆ, ಭವ್ಯವಾದ ಸೇತುವೆಗಳು, ಕಿರಿದಾದ ಬೀದಿಗಳು, ಹಳೆಯ ಕೋಟೆಗಳು ಮತ್ತು ಅನನ್ಯ ವೈಬ್‌ಗಳಿಗೆ ಹೆಸರುವಾಸಿಯಾಗಿದೆ. ವಿಶೇಷವೇನೆಂದರೆ ದೇಶದ 12 ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
3. ನ್ಯೂಜಿಲೆಂಡ್ : ಪಟ್ಟಿಯಲ್ಲಿ ಮುಂದಿನ ಸ್ಥಾನದಲ್ಲಿ ನ್ಯೂಜಿಲೆಂಡ್ ಇದೆ. ಇದು ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಈ ದೇಶದ ನಿವಾಸಿಗಳು ತಮ್ಮ ಆತಿಥ್ಯ ಮತ್ತು ಸ್ನೇಹಪರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ನ್ಯೂಜಿಲೆಂಡ್ ತನ್ನ ನೈಸರ್ಗಿಕ ಸೌಂದರ್ಯ ಮತ್ತು ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇನ್ನು, ನ್ಯೂಜಿಲೆಂಡ್‌ನ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಫ್ರಾಂಜ್ ಜೋಸೆಫ್ ಗ್ಲೇಸಿಯರ್, ಫಿಯೋರ್ಡ್‌ಲ್ಯಾಂಡ್ ನ್ಯಾಷನಲ್ ಪಾರ್ಕ್ ಮತ್ತು ಮೌಂಟ್ ಈಡನ್ ಮುಂತಾದವುಗಳಾಗಿವೆ.
4. ಐಸ್ಲ್ಯಾಂಡ್ : ಗ್ಲೋಬಲ್ ಪೀಸ್ ಇಂಡೆಕ್ಸ್ ಪ್ರಕಾರ ಐಸ್ಲ್ಯಾಂಡ್ ವಿಶ್ವದ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಐಸ್‌ಲ್ಯಾಂಡ್‌ನ 15 ಪ್ರತಿಶತದಷ್ಟು ಪ್ರದೇಶವು ಹಿಮನದಿಗಳಿಂದ ಆವೃತವಾಗಿದೆ. ಸಕ್ರಿಯ ಜ್ವಾಲಾಮುಖಿಗಳು ಭವ್ಯವಾದ ದೃಶ್ಯಾವಳಿಗಳನ್ನು ಸೃಷ್ಟಿಸುತ್ತವೆ. ಐಸ್‌ಲ್ಯಾಂಡ್‌ನ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಪ್ರಸಿದ್ಧ ನಾರ್ದರ್ನ್ ಲೈಟ್ಸ್, ದಿ ಬ್ಲೂ ಲಗೂನ್, ಗೀಸಿರ್ ಹಾಟ್ ಸ್ಪ್ರಿಂಗ್ಸ್ ಮತ್ತು ಪಿಂಗ್‌ವೆಲ್ಲಿರ್ ನ್ಯಾಷನಲ್ ಪಾರ್ಕ್‌ಗಳಾಗಿವೆ.
5. ಸ್ವಿಟ್ಜರ್ಲೆಂಡ್ : ಸ್ವಿಟ್ಜರ್ಲೆಂಡ್ ಪ್ರಪಂಚದಾದ್ಯಂತದ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದೇಶವು ತನ್ನ ನೈಸರ್ಗಿಕ ಸೌಂದರ್ಯ, ಉಸಿರುಕಟ್ಟುವ ಭೂದೃಶ್ಯಗಳು, ಹಿಮದಿಂದ ಆವೃತವಾದ ಪರ್ವತಗಳು, ಹಸಿರು ಕಣಿವೆಗಳು ಮತ್ತು ಚಾಕೊಲೇಟ್‌ಗಳಿಗೆ ಹೆಸರುವಾಸಿಯಾಗಿದೆ. ಗ್ಲೋಬಲ್ ಪೀಸ್ ಇಂಡೆಕ್ಸ್ ಪ್ರಕಾರ, ಸ್ವಿಟ್ಜರ್ಲೆಂಡ್ ವಿಶ್ವದ ಅತ್ಯಂತ ಶಾಂತಿಯುತ ದೇಶವಾಗಿ ಏಳನೇ ಸ್ಥಾನದಲ್ಲಿದೆ. ನೀವು ಪ್ರಪಂಚವನ್ನು ಅನ್ವೇಷಿಸಲು ಬಯಸುವ ಮಹಿಳೆಯಾಗಿದ್ದರೆ ಈ ದೇಶವೂ ನಿಮ್ಮ ಪಟ್ಟಿಯಲ್ಲಿರಲಿ.
ಅಂದಹಾಗೆ ಏಕಾಂಗಿ ಪ್ರಯಾಣವೆಂದರೆ ಪ್ರವಾಸದ ಉದ್ದಕ್ಕೂ ನೀವು ಏಕಾಂಗಿಯಾಗಿರಬೇಕೆಂದು ಅರ್ಥವಲ್ಲ. ಹಲವಾರು ಟ್ರಾವೆಲ್ ಏಜೆನ್ಸಿಗಳು ಏಕವ್ಯಕ್ತಿ ಪ್ರವಾಸಿಗರಿಗೆ ಉತ್ತಮ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ