ಬೀದರ.07.ಫೆಬ್ರುವರಿ.25:-ಹುಮನಾಬಾದ ಪಟ್ಟಣದ ಆಸ್ತಿ ಹಾಗೂ ನೀರಿನ ತೆರಿಗೆಯನ್ನು ಸಂಗ್ರಹಿಸಲು ಪುರಸಭೆÉ ವ್ಯಾಪ್ತಿಯ ಡೇ ನಲ್ಮ್ ಅಭಿಯಾನದಡಿ ನೊಂದಾಯಿಸಲ್ಪಟ್ಟ ಅರ್ಹ ಹಾಗೂ ಆಸಕ್ತ ಮಹಿಳಾ ಸ್ವ ಸಹಾಯ ಗುಂಪುಗಳನ್ನು ತೆರಿಗೆ ವಸೂಲಾತಿಗಾಗಿ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹುಮನಾಬಾದ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಮನಾಬಾದ ಪುರಸಭೆ ವ್ಯಾಪ್ತಿಯಲ್ಲಿನ ನೀರಿನ ಬಳಕೆಯ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ಪ್ರಸಕ್ತ ವಾರ್ಷಿಕ ಸಹಿತ ವಸೂಲಿ ಮಾಡುವುದು ಹಾಗು ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ವಾರ್ಷಿಕ ಬೇಡಿಕೆಗೆ ಅನುಗುಣವಾಗಿ ಸಮರ್ಪಕವಾಗಿ ವಸೂಲಿ ಮಾಡುವ ಸ್ಥಳೀಯ ಸ್ವ ಸಹಾಯ ಗುಂಪುಗಳ ಸೇವೆಯನ್ನು ಪಡೆಯಲು ಮತ್ತು ಸ್ವಸಹಾಯ ಗುಂಪುಗಳ ವಸೂಲಾತಿ ಮೊತ್ತದಲ್ಲಿ ಶೇ 5% ರಷ್ಟನ್ನು ಪ್ರೂತ್ಸಾಹ ಧನದ ರೂಪದಲ್ಲಿ ನೀಡಲು ಸರ್ಕಾರವು ಆದೇಶಿಸಿದೆ.
ಅರ್ಹ ಇಚ್ಛೆಯುಳ್ಳ ಸ್ವ-ಸಹಾಯ ಸಂಘಗಳು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 20-02-2025 ರಂದು ಸಂಜೆ 5.00 ಗಂಟೆಯೊಳಗಾಗಿ ಮುಖ್ಯಾಧಿಕಾರಿಗಳು, ಹುಮನಾಬಾದ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.