Home » ಲೈವ್ ನ್ಯೂಸ್ » SC ಬಲಗೈ ಒಳಮೀಸಲಾತಿ ಹೋರಾಟ ಸಮೀತಿ ವತಿಯಿಂದ ಹೋರಾಟಕೆ ಕರೆ.

SC ಬಲಗೈ ಒಳಮೀಸಲಾತಿ ಹೋರಾಟ ಸಮೀತಿ ವತಿಯಿಂದ ಹೋರಾಟಕೆ ಕರೆ.

Facebook
X
WhatsApp
Telegram

ಔರಾದ ಬಿ.05.ಮಾರ್ಚ್.26: ರಾಜ್ಯದಲ್ಲಿ ಒಳಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ರಾಜ್ಯ ಸರ್ಕಾರ ಸರಿಪಡಿಸಬೇಕು ಎಂದು ಒತ್ತಾಯಿಸಿ ಬಲಗೈ ಸಮುದಾಯದವರು ಔರಾದ ಬಿ ಪ್ರತಿಭಟನೆ ಗೆ ಕರೆ ಕೊಟ್ಟಿದಾರೆ

ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ. ಇದರಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ.

ಸರ್ಕಾರಿ ನೇಮಕಾತಿಯಲ್ಲಿ ಉದ್ಯೋಗಗಳನ್ನು ನೇಮಕ ಮಾಡಿದಾಗ ಬಲಗೈ ಸಂಬಂಧಿತ ಜಾತಿಗಳಿಗೆ ಯಾವುದೇ ಉದ್ಯೋಗ ದೊರಕುವುದಿಲ್ಲ. ಉನ್ನತ ಶಿಕ್ಷಣ ಪ್ರವೇಶಾತಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಬಡ್ತಿಯಲ್ಲಿಯೂ ಅವಕಾಶ ಸಿಗುವುದಿಲ್ಲ. ಹಾಗಾಗೀ ಸರ್ಕಾರ ಇಂತಹ ಅವೈಜ್ಞಾನಿಕ ಪರಿಶಿಷ್ಟ ಜಾತಿಗಳ ಕಾಯ್ದೆಯನ್ನು ತಿರಸ್ಕರಿಸಬೇಕು’ ಎಂದು ಹೋರಾಟಕ್ಕೆ ಸಜ್ಜೆ ಆಗಿದ್ದಾರೆ.

ವಿಸ್ತಾರವಾಗಿ…..

ಪರಿಶಿಷ್ಟ ಜಾತಿಯ ಒಳಮೀಸಲಾತಿ ಬಲಗೈ ಸಮುದಾಯಕ್ಕೆ (ಹೊಲೆಯ) ಆಗಿರುವ ಅನ್ಯಾಯವನ್ನು ಖಂಡಿಸಿ ಒಂದು ದಿನದ ಔರಾದ ಬಂದ್ ಕರೆ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆಗಸ್ಟ್-1, 2024, ರಂದು ಸುಪ್ರಿಂ ಕೋರ್ಟ ನೀಡಿದ ತೀರ್ಪಿನ ಮೂಲಕ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರವನ್ನು ನೀಡಿದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ನೇತೃತ್ವದ ಸರ್ಕಾರ ಪರಿಶೀಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೋಳಿಸಲು ಸುಪ್ರೀಂ ಕೋರ್ಟ ನಿಯಮಾವಳಿಯಂತೆ 101 ಸಮುದಾಯಗಳ ಸಾಮಾಜಿಕ, ಅರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತ್ತು. ಸದರಿ ಆಯೋಗವು ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಸರ್ಕಾರವು ಅದನ್ನು ಕ್ಯಾಬಿನೇಟ್‌ನಲ್ಲಿ ಚರ್ಚಿಸಿ, ಪರಿಶೀಲಿಸಿ, ಕೆಲವು ತಿದ್ದುಪಡಿಗಳೊಂದಿಗೆ ಪ್ರವರ್ಗ-ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಆದರೆ ಸರ್ಕಾರದ ಆ ನಿರ್ಧಾರದಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದ್ದು, ಕೂಡಲೆ ಅದನ್ನು ಸರಿಪಡಿಸಬೆಕೆಂದು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ದಿನದ ಸಾಂಕೇತಿಕವಾಗಿ ಔರಾದ ಬಂದ್ ಗೆ ಕರೆನಿಡಿದ್ದು ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೆಕೆಂದು ಕೊರಿಕೆ.

ಹಕ್ಕೊತ್ತಾಯಗಳು:

1) ರೋಸ್ಟರ್ ಬಿಂದುವಿನಲ್ಲಿ ಇರುವ ನ್ಯೂನ್ಯತೆಗಳನ್ನು ಹಾಗೂ ಸರ್ಕಾರ ತಮಗೆ ಕಳುಹಿಸಿರುವ ಒಳಮೀಸಲಾತಿಯ ವರದಿಯನ್ನು ಪ್ರವರ್ಗ-ಬಿ ಮತ್ತು ಸಿ ರವರಿಗೆ ಮರಣ ಶಾಸನವಾಗಿದ್ದು. ಇದನ್ನು ರಾಜ್ಯಪಾಲರು ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಬೆಕು.

2) ಪ್ರವರ್ಗ- ಎ, ಬಿ, ಸಿ ರವರಿಗೆ ಸಮಾನ ಅವಕಾಶ ಕಲ್ಪಿಸುವಂತಹ ಕಾಯ್ದೆಯನ್ನು ರೂಪಿಸಬೇಕು. ಮತ್ತು ಒಳಮೀಸಲಾತಿಗೆ ಅನ್ವಯಿಸುವ ರೋಸ್ಟ‌ರ್ ಬಿಂದುವನ್ನು ಪರಿಷ್ಕರಿಸಿ ಸರಿಪಡಿಸಬೇಕು.

3) ಪ್ರವರ್ಗ- ಎ, ಬಿ, ಸಿ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಒಳಮೀಸಲಾತಿ ವರದಿಯ ಸಮಸ್ಯೆಯು ಬಗೆಹರಿಯುವ ತನಕ ಪ್ರಸ್ತುತ ಶೈಕ್ಷಣಿಕ ವಲಯ ಮರು ಉದ್ಯೋಗಕ್ಕೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯಚಟುವಟಿಗೆಗಳನ್ನು ಶೀಘ್ರವೇ ನಿಲ್ಲಿಸಬೇಕು.

4) ಒಳ ಮೀಸಲಾತಿಯ ಗೊಂದಲಗಳನ್ನು ಹಾಗೂ ನ್ಯೂನ್ಯತೆಗಳನ್ನು ಪರಿಹರಿಸುವ ತನಕ ಹಳೆ ಮೀಸಲಾತಿ ಅನ್ವಯ ಖಾಲಿ ಹುದ್ದೇಗಳನ್ನು ಬರ್ತಿ ಮಾಡಬೇಕು.

5) ಹೊಸ ಜಾತಿ ಪ್ರಮಾಣ ಪತ್ರ ವಿತರಿಸುದನ್ನು ತುರ್ತಾಗಿ ನಿಲ್ಲಿಸಿ, ಹಳೆ ಜಾತಿ ಪ್ರಮಾಣ ಪತ್ರವನ್ನೇ ಮುಂದುವರೆಸಬೇಕು.

::ತಾಲೂಕು ಪದಾಧಿಕಾರಿಗಳು::

ಗೌರವಾಧ್ಯಕ್ಷ:- ಸುಭಾಷ ಲಾಧಾ,

ಅಧ್ಯಕ್ಷ:- ಪ್ರವೀಣ ಕಾರಂಜೆ

ಕಾರ್ಯಧ್ಯಕ್ಷ:- ಸಂಜುಕುಮಾರ ಲಾಧಾ

ಪ್ರಧಾನ ಕಾರ್ಯದರ್ಶಿ:- ಸಂತೋಷ ಶಿಂದೆ, ಧನಾಜಿ ಕಾಂಬಳೆ. ಉಪಾಧ್ಯಕ್ಷರು:- ದಿನೇಶ ಶಿಂದೆ, ತುಕಾರಾಮ ಹಸ್ಮತುಖಿ, ಅಖಿಲೇಶ ಸಾಗರ್, ಆನಂದ ಕಾಂಬಳೆ, ಪ್ರಕಾಶ ಕಾಂಬಳೆ ಪ್ರಚಾರ ಸಮಿತಿ:- ರತ್ನದೀಪ ಕಸ್ತೂರೆ, ಖಜಾಂಜಿ:- ಸುನಿಲ ಮಿತ್ರಾ, ಪ್ರಕಾಶ ಭಂಗಾರೆ, ಸಂತೋಷ ಸುರ್ಯವಂಶಿ, ಮಾರೂತಿ ಜಗದಾಳೆ. ಕಾರ್ಯದರ್ಶಿಗಳು:- ಅನಿಲ ಭುಜಂಗೆ. ಉತ್ತಮ ಗಾಯಕವಾಡ, ಸಂಪತ ಫೈಟರ, ಸುಂದರ ಮೆತ್ರೆ, ವಿನೋದ ಡೋಳೆ, ಅಂಬರೀಶ ಕ್ರಾತಿಕಾರಿ, ಸುರ್ಯಕಾಂತ ರಕ್ಷಾಳೆ, ಕಾಂತೆಶ ಭಾಲ್ಕೆ, ರವಿ ನಾಗುರೆ, ಸೋನು ನಾಗುರೆ, ರಾಹುಲ ಬೋರೆ.

ಗೌರವ ಸಲಹೆಗಾರರು:- ಝರೆಪ್ಪಾ ವರ್ಮಾ, ಗಣಪತಿ ವಾಸುದೇವ, ಉತ್ತಮ ಮಾಂಜರೆಕರ, ರಾಜಕುಮಾರ ಮೈಲಾರೆ, ಗೌತಮ ಮೇತ್ರೆ, ಶೀವು ಕಾಂಬಳೆ, ರಾಹುಲ ಖಂದಾರೆ, ನರೇಂದ್ರ ಮೋರೆ, ಅನಂದ ಗಲಗಲೆ. ಸಿಧಾರ್ಥ ಭೋಸಲೆ, ಬಸವರಾಜ ಕಾಂಬಳೆ,

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology