09/06/2025 12:36 PM

Translate Language

Home » ಲೈವ್ ನ್ಯೂಸ್ » PUC Accademic ವೇಳಾಪಟ್ಟಿ ಪ್ರಕಟ: ಜೂ. 2ರಿಂದ ಕಾಲೇಜುಗಳು ಆರಂಭ

PUC Accademic ವೇಳಾಪಟ್ಟಿ ಪ್ರಕಟ: ಜೂ. 2ರಿಂದ ಕಾಲೇಜುಗಳು ಆರಂಭ

Facebook
X
WhatsApp
Telegram

ಬೆಂಗಳೂರು.26.ಫೆ.25:- ರಾಜ್ಯದಲ್ಲಿ 2025-26ನೇ ಸಾಲಿನ ಪಿಯು PUC ACCADEMIC 2025-26  ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಂದ ಬೆನ್ನಲ್ಲೇ ಜೂನ್ 2ರಿಂದ ಕಾಲೇಜುಗಳು ಆರಂಭವಾಗಲಿವೆ.

ದ್ವಿತೀಯ ಪಿಯು PUC IInd Admission ದಾಖಲಾತಿ ಪ್ರಕ್ರಿಯೆ ಮೇ 22ರಿಂದಲೇ ಪ್ರಾರಂಭವಾಗಲಿದ್ದು, ಜೂನ್ 2ರಿಂದ ತರಗತಿಗಳು ಆರಂಭಗೊಳ್ಳಲಿವೆ.

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಮಧ್ಯಂತರ ರಜೆ ಇರಲಿದೆ.

PUC Ist and llnd ಪಿ.ಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ಮೊದಲ ಅವಧಿ ಜೂನ್ 2 ರಿಂದ ಸೆಪ್ಟೆಂಬರ್ 21ರವರೆಗೆ ಇರಲಿದ್ದು, ಎರಡನೇ ಅವಧಿ ಅಕ್ಟೋಬರ್ 8 ರಿಂದ 2026ರ ಮಾರ್ಚ್ 31ರವರೆಗೆ ಇರಲಿದೆ. 2026ರ ಏಪ್ರಿಲ್ 1ರಿಂದ ಬೇಸಿಗೆ ರಜೆ ಅವಧಿ ಪ್ರಾರಂಭವಾಗಲಿದೆ.

ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 9 ರಿಂದ 27ರವರೆಗೆ ಮದ್ಯ ವಾರ್ಷಿಕ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ 2026ರ ಜನವರಿ 21ರಿಂದ ಪ್ರಾರಂಭವಾಗಲಿದೆ.

ಪ್ರಥಮ ಪಿಯು ವಾರ್ಷಿಕ ಪರೀಕ್ಷೆ 2026ರ ಫೆ, 10 ರಿಂದ ಪ್ರಾರಂಭವಾದರೆ, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ 2026ರ ಫೆಬ್ರವರಿ 26ರಿಂದ ಮಾರ್ಚ್ 21ರವರೆಗೆ ಸಾಗಲಿದೆ. ಮಾರ್ಚ್ 31ರಂದು ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಮೇ ಮೊದಲ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಮೇ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!