2025-26 ನೇ ಸಾಲಿನ ಸಾಮಾನ್ಯ ವರ್ಗಾವಣೆಯಿಂದ ಖಾಲಿಯಾದ ಶುಶ್ರೂಷಾಧಿಕಾರಿಗಳ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇರ ಸಂದರ್ಶನ ಹಾಗೂ ಯೋಜನೆಯ ನಿಯಮಾನುಸಾರ ಮೆರಿಟ್ ಹಾಗೂ ರೊಷ್ಠರ್ ಪ್ರಕಾರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಇದೆ ತಿಂಗಳು ಜುಲೈ 25, 2025 ರಂದು ಬೆಳಗ್ಗೆ 10:00 AM ಗಂಟೆಯಿಂದ ಸಂಜೆ 4:೦೦ PM ಗಂಟೆಯವರೆಗೆ ನೇರ ಸಂದರ್ಶನವನ್ನು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಇವರ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಆಸಕ್ತಿ ಅರ್ಹ ಅಭ್ಯರ್ಥಿಗಳು ಸೂಚಿತ ಅವದಿಯಲ್ಲಿ ಹಾಜರಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ R.C.H ಆರ್.ಸಿ.ಹೆಚ್. ಅಧಿಕಾರಿಗಳ ಕಚೇರಿ ಎನ್.ಹೆಚ್.ಎಮ್ ವಿಭಾಗದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ಪ್ರಕಟಣೆ ತಿಳಿಸಿದೆ.