Home » ಲೈವ್ ನ್ಯೂಸ್ » National Herald case:ಇ.ಡಿ ಅರ್ಜಿಗೆ ಉತ್ತರ ನೀಡಲು 3 ವಾರ ಕಾಲಾವಕಾಶ.

National Herald case:ಇ.ಡಿ ಅರ್ಜಿಗೆ ಉತ್ತರ ನೀಡಲು 3 ವಾರ ಕಾಲಾವಕಾಶ.

ಹೊಸ ದೆಹಲಿ.27.ಜುಲೈ.26:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಲು ದೆಹಲಿ ಹೈಕೋರ್ಟ್ ಸೋಮವಾರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರಿಗೆ 3 ವಾರಗಳ ಅವಕಾಶ ನೀಡಲಾಗಿದೆ.

ಸುಪ್ರೀಂಕೋರ್ಟ್‌ ಪೀಠದ ಜಸ್ಟೀಸ್‌ ಮನೋಜ್‌ ಜೈನ್‌ ಅವರು, ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 10ರಂದು ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ಸಮಯ ನಿಗದಿಪಡಿಸುವುದಾಗಿ ಜಸ್ಟೀಸ್‌ ಜೈನ್‌ ತಿಳಿಸಿರುವುದಾಗಿ ವರದಿಯಾಗಿದೆ.

ಜಾರಿ ನಿರ್ದೇಶನಾಲಯದ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಸಮಯಾವಕಾಶ ನೀಡಬೇಕೆಂದು ಕಕ್ಷಿದಾರರ ಪರ ಹಿರಿಯ ವಕೀಲರು ಕೋರ್ಟ್‌ ಗೆ ಮನವಿ ಮಾಡಿಕೊಂಡಿದ್ದರು.

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು “ದೊಡ್ಡ ತಪ್ಪು ಮಾಡಿದೆ. ಹೈಕೋರ್ಟ್ ಎರಡು ತಿಂಗಳ ಹಿಂದೆ ಸಮಯ ನೀಡಿದ್ದರೂ ಪ್ರತಿವಾದಿಗಳು ಯಾವುದೇ ಉತ್ತರವನ್ನು ಸಲ್ಲಿಸಿಲ್ಲ ಎಂದು ಹೇಳಿದರು.

ಇದು ಕೇವಲ ಕಾನೂನಿನ ಪ್ರಶ್ನೆ. ಉತ್ತರ ಸಲ್ಲಿಸಲು ಎರಡು ತಿಂಗಳ ಹಿಂದೆಯೇ ಸಮಯ ನೀಡಲಾಗಿತ್ತು. ಉತ್ತರ ಸಲ್ಲಿಸುವುದನ್ನು ನಾನು ಆಕ್ಷೇಪಿಸಲು ಸಾಧ್ಯವಿಲ್ಲ. ಇದು ಶುದ್ಧ ಕಾನೂನಿನ ಪ್ರಶ್ನೆ” ಎಂದು ಸಾಲಿಸಿಟರ್ ಜನರಲ್ ಈ ಸಂದರ್ಭದಲ್ಲಿ ವಾದಿಸಿದರು.

ಡಿಸೆಂಬರ್ 22, 2025 ರಂದು, ಹೈಕೋರ್ಟ್ ಗಾಂಧಿ ಕುಟುಂಬ ಮತ್ತು ಇತರರಿಗೆ ಮುಖ್ಯ ಅರ್ಜಿಯ ಮೇರೆಗೆ ಮತ್ತು ಡಿಸೆಂಬರ್ 16 ರ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಇ.ಡಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನೋಟಿಸ್ ನೀಡಿತ್ತು. ಈ ಪ್ರಕರಣದಲ್ಲಿ ಇ.ಡಿಯ ದೂರನ್ನು ಎಫ್‌ಐಆರ್‌ನಲ್ಲಿ ನಮೂದಿಸಿಲ್ಲವಾದ್ದರಿಂದ ಅದನ್ನು ಪರಿಗಣಿಸುವುದು “ಕಾನೂನಿನಲ್ಲಿ ಸ್ವೀಕಾರಾರ್ಹವಲ್ಲ” ಎಂದು ಹೇಳಿತ್ತು.

ಪ್ರಕರಣದಲ್ಲಿ ಗಾಂಧಿ ಕುಟುಂಬದವರಲ್ಲದೆ, ಹೈಕೋರ್ಟ್ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸುನಿಲ್ ಭಂಡಾರಿ ಅವರಿಗೂ ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ನೋಟಿಸ್ ಜಾರಿ ಮಾಡಿತ್ತು.

Author

ಪ್ರಮುಖ ಸುದ್ದಿ

Stock market

Astrology