|

Music Academy Course.ಸಂಗೀತ ಅಕಾಡೆಮಿ ಕೋರ್ಸ್‌ಗೆ ಅರ್ಜಿ ಆಹ್ವಾನ

ಬೆಂಗಳೂರು.29.ಮೇ.25:- ಕರ್ನಾಟಕ ಸಂಗೀತದಲ್ಲಿನ ಅಡ್ವಾನ್ಸ್ಡ್‌ ಡಿಪ್ಲೊಮಾ ಕೋರ್ಸ್‌ಗೆ ‘ದಿ ಮ್ಯೂಸಿಕ್ ಅಕಾಡೆಮಿ ಮದ್ರಾಸ್‌’ ಅರ್ಜಿ ಆಹ್ವಾನಿಸಿದೆ. ಈ  ಕೋರ್ಸು ಮೂರು ವರ್ಷಗಳ ಕಲಿಯಬೇಕು.

ಅರ್ಜಿ ಸಲ್ಲಿಸಲು ಜೂನ್‌ 25 ಕಡೆಯ ದಿನ. ಜುಲೈನಿಂದ ತರಗತಿಗಳು ಆರಂಭವಾಗಲಿದ್ದು, ‘ದಿ ಮ್ಯೂಸಿಕ್‌ ಅಕಾಡೆಮಿ’ಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ತರಗತಿಗಳು ನಡೆಯುತ್ತವೆ.

12ನೇ ತರಗತಿ ಉತ್ತೀರ್ಣರಾಗಿರುವ, 18ರಿಂದ 30 ವರ್ಷ ವಯಸ್ಸಿನ ನಡುವೆ ಇರುವವರು ಈ ಕೋರ್ಸ್‌ಗೆ ಸೇರಲು ಅರ್ಹರು. ಕೋರ್ಸ್‌ ಸೇರಲು ಬಯಸುವವರಿಗೆ ವರ್ಣಗಳು, ಕೃತಿಗಳನ್ನು ಹಾಡಲು ಬರಬೇಕು, ಅವರಿಗೆ ತಕ್ಕಮಟ್ಟಿಗೆ ಸಂಗೀತದ ಮನೋಧರ್ಮ ಇರಬೇಕು ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ನಮೂನೆಗಳನ್ನು ಅಕಾಡೆಮಿಯ ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳಬಹುದು. ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ವೈಯಕ್ತಿಕ ವಿವರ ಮತ್ತು ಸಂಗೀತ ತರಬೇತಿ ವಿವರಗಳ ಜೊತೆ ಇ-ಮೇಲ್‌ ಮೂಲಕ ಕಳುಹಿಸಬೇಕು.

ವೆಬ್‌ಸೈಟ್‌ ವಿಳಾಸ: www.musicacademymadras.in ದೂರವಾಣಿ ಸಂಖ್ಯೆ: 044-2811
2231, 2811 6902, 2811 5162.

Similar Posts

Leave a Reply

Your email address will not be published. Required fields are marked *