09/06/2025 7:39 PM

Translate Language

Home » ಲೈವ್ ನ್ಯೂಸ್ » Karnaraka State Open University (KSOU) ಕರಾಮುವಿ: ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

Karnaraka State Open University (KSOU) ಕರಾಮುವಿ: ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ.11.ಮಾರ್ಚ.25:- ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿರುವ ಹಾಗೂ ಎನ್‌ಎಎಸಿ ಎ+ ಮಾನ್ಯತೆ ಪಡೆದಿರುವ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಬೀದರದಲ್ಲಿ ಶೈಕ್ಷಣಿಕ ವರ್ಷ 2024-25ರ ಜನವರಿ ಆವೃತ್ತಿಯಲ್ಲಿ ಪ್ರಥಮ ವರ್ಷಕ್ಕೆ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಬೀದರನ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋರ್ಸುಗಳ ವಿವರ: ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲೂö್ಯ., ಬಿ.ಲಿಬ್.ಐ.ಎಸ್ಸಿ., ಎಂ.ಎ., ಎಂ.ಎಸ್.ಡಬ್ಲೂö್ಯ., ಎಂ.ಕಾA., ಎಂ.ಸಿ.ಎ., ಎಂ.ಲಿಬ್.ಐ.ಎಸ್ಸಿ., ಎಂ.ಎಸ್ಸಿ., ಎಂ.ಜಿ.ಎ. ಮತ್ತು ಯುಜಿ/ಪಿಜಿ, ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸುಗಳು.

ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ವಿವಿಯ ಅಂತರ್ಜಾಲದಲ್ಲಿರುವ ಅಡ್ಮಿಷನ್ ಪೋರ್ಟಲ್ https://esouportal.com/views/studenthome.aspx  

ನಲ್ಲಿ ಮೂಲಕ ಅರ್ಜಿಯನ್ನು ಸಲ್ಲಿಸಿ ಆಯಾ ಶಿಕ್ಷಣಕ್ರಮಗಳಿಗೆ ಸಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ ಅನುಸಾರ ದಾಖಲಾತಿಗಳೊಂದಿಗೆ ಪ್ರಾದೇಶಿಕ ಕೇಂದ್ರ ಬೀದರದಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9986696487, 9901216737 ಗೆ ಅಥವಾ ಖುದ್ದಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೌಬಾದ್ ಬೀದರಕ್ಕೆ ಭೇಟಿ ನೀಡಿ ಪ್ರವೇಶಾತಿ ಸಂಬAಧ ಮಾಹಿತಿ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ದಿನಾಂಕ: 30-03-2025 ಕೊನೆಯ ದಿನಾಂಕವಾಗಿರುತ್ತದೆ.

ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಲ್ಲಿ ಬೀದರ ಪ್ರಾದೇಶಿಕ ಕೇಂದ್ರ ಕಛೇರಿಯು ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!