09/06/2025 7:02 AM

Translate Language

Home » ಲೈವ್ ನ್ಯೂಸ್ » ISRO ಭಾರತದ ಬಾಹ್ಯಾಕಾಶ ಸಂಸ್ಥೆ ನಲ್ಲಿ 63 ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ.!

ISRO ಭಾರತದ ಬಾಹ್ಯಾಕಾಶ ಸಂಸ್ಥೆ ನಲ್ಲಿ 63 ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ.!

Facebook
X
WhatsApp
Telegram

ISROಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಇಂಜಿನಿಯರ್ ಮತ್ತು ವಿಜ್ಞಾನಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಬಿಎಇ  ಅಥವಾ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿಯನ್ನು ಕನಿಷ್ಠ ಶೇಕಡಾ 65 ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಏಳನೇ ವೇತನ ಆಯೋಗದ ಪ್ರಕಾರ ಲೆವೆಲ್-10 ಪೇ ಮೆಟ್ರಿಕ್ಸ್‌ನಲ್ಲಿ ವೇತನ ನೀಡಲಾಗುತ್ತದೆ, ಜೊತೆಗೆ ರೂ. 56,100 ಬೇಟಿಕ್ ಪೇ ಇರುತ್ತದೆ.ಈ ಹುದ್ದೆಗಳು ವಿವಿಧ ಇಂಜಿನಿಯರಿಂಗ್ ಶಾಖೆಗಳಿಗಾಗಿದ್ದು, ಅಭ್ಯರ್ಥಿಗಳು ಯಾವ ಶಾಖೆಗೆ ಅವಕಾಶವಿದೆ ಎಂಬುದನ್ನು ಅಧಿಸೂಚನೆಯಲ್ಲಿಂದ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಹೀಗಾಗಿ, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಅಗತ್ಯ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು, ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಜಿ ಸಲ್ಲಿಸುವುದು ಸೂಕ್ತ.

ನೇಮಕಾತಿ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೊ

ಹುದ್ದೆಗಳ ಹೆಸರು ಇಂಜಿನಿಯರ್ ಹಾಗೂ ವಿಜ್ಞಾನಿಗಳು

ಉದ್ಯೋಗ ಸ್ಥಳ ಬೆಂಗಳೂರು, ಹೈದೆರಾಬಾದ್, ಅಹ್ಮೆದಾಬಾದ್, ಶ್ರೀಹರಿಕೊಟಾ, ತಿರುವನಂತಪುರಮ್, ಮಹೇಂದ್ರಗಿರಿ, ವಲಿಯಮಾಲಾ, ಹಾಸನ.

ಒಟ್ಟು ಹುದ್ದೆಗಳ ಸಂಖ್ಯೆ 63

ವಿದ್ಯಾರ್ಹತೆ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ BE ಅಥವಾ B.Tech ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ ವಿವರ
ಇಸ್ರೊ ಸೈಂಟಿಸ್ಟ್‌ / ಇಂಜಿನಿಯರ್ ‘ಎಸ್‌ಸಿ’ ಹುದ್ದೆಗಳಿಗೆ ಆಯ್ಕೆಯಾದವರಿಗೆ ಲೆವೆಲ್‌ 10 ಪೇ ಮೆಟ್ರಿಕ್ಸ್‌ ವೇತನ ಇರಲಿದ್ದು, ಬೇಸಿಕ್ ಪೇ ರೂ.56,100 ಇರಲಿದೆ.

ಅರ್ಜಿಶುಲ್ಕ:

ಎಲ್ಲಾ ಅಭ್ಯರ್ಥಿಗಳಿಗೆ: ₹250/-

ಪಾವತಿ ವಿಧಾನ: ಆನ್‌ಲೈನ್ ಮೂಲಕ

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 29-04-2025

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19-05-2025

ಅಪ್ಲಿಕೇಶನ್‌ ಶುಲ್ಕ ಪಾವತಿಸಲು ಕೊನೆ ದಿನಾಂಕ: 21-05-2025

ಆಯ್ಕೆ ವಿಧಾನ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಗೇಟ್ ಅಂಕಗಳು, ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಪ್ಲಿಕೇಶನ್‌ ಶುಲ್ಕ ವಿವರ

ಜೆನೆರಲ್ ಕೆಟಗರಿ, ಒಬಿಸಿ, ಇತರೆ ಎಲ್ಲ ಕೆಟಗರಿ ಅಭ್ಯರ್ಥಿಗಳಿಗೆ ರೂ.250.

ಅರ್ಜಿ ಶುಲ್ಕವನ್ನು ಇಂಟರ್‌ನೆಟ್‌ ಬ್ಯಾಂಕಿಂಗ್, ಡೆಬಿಟ್‌ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಮೂಲಕ ಪಾವತಿ ಮಾಡಬಹುದು.

ಅರ್ಜಿಸಲ್ಲಿಸುವ ವಿಧಾನಗಳು:

ಅಧಿಕೃತ ವೆಬ್‌ಸೈಟ್ https://www.isro.gov.in/ ಗೆ ಭೇಟಿ ನೀಡಿ.

ನಿಮಗೆ ಸಂಬಂಧಪಟ್ಟ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ನೇಮಕಾತಿ ಅಥವಾ ಉದ್ಯೋಗದ ವಿವರಗಳನ್ನು ಪರಿಶೀಲಿಸಿ.

ವಿಜ್ಞಾನಿ/ಇಂಜಿನಿಯರ್ ‘SC’ ಹುದ್ದೆಗಳ ಅಧಿಸೂಚನೆಯನ್ನು ಓದಿ ಹಾಗೂ ತಮ್ಮ ಅರ್ಹತೆಯನ್ನು ದೃಢಪಡಿಸಿ.

ಅರ್ಜಿ ಸಲ್ಲಿಸುವ ಮುನ್ನ ಕೊನೆಯ ದಿನಾಂಕವನ್ನು ಎಚ್ಚರಿಕೆಯಿಂದ ಗಮನಿಸಿ.

ಅರ್ಹರೆಂದು ಕಂಡುಬಂದರೆ, ಯಾವುದೇ ತೊಂದರೆಯಿಲ್ಲದೆ ಅರ್ಜಿ ನಮೂನೆಯನ್ನು ಸಂಪೂರ್ಣ ಹಾಗೂ ಶುದ್ಧವಾಗಿ ಭರ್ತಿ ಮಾಡಿ.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 19-05-2025 ಆಗಿದ್ದು, ಅದರ ಒಳಗೆ ಅರ್ಜಿಯನ್ನು ಸಲ್ಲಿಸಿ.

ಸಲ್ಲಿಸಿದ ನಂತರ ಪ್ರಾಪ್ತಿಯಾದ ಅರ್ಜಿ ಸಂಖ್ಯೆ ಅಥವಾ ಕೊರಿಯರ್ ಸ್ವೀಕೃತಿ ಸಂಖ್ಯೆಯನ್ನು ಭವಿಷ್ಯದಲ್ಲಿ ಬಳಸುವ ಸಲುವಾಗಿ ಸುರಕ್ಷಿತವಾಗಿ ಉಳಿಸಿ.

Website Link:      https://www.isro.gov.in/

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!