05/07/2025 3:01 AM

Translate Language

Home » ಲೈವ್ ನ್ಯೂಸ್ » IBPS ಬ್ಯಾಂಕುಗಳಲ್ಲಿ 5,208 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

IBPS ಬ್ಯಾಂಕುಗಳಲ್ಲಿ 5,208 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಪದವಿ ಪಡೆದ ನಂತರ ಬ್ಯಾಂಕ್ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಶುಭವಾರ್ತೆ ಇದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನಲ್ ಸೆಲೆಕ್ಷನ್ (IBPS) ಸಂಸ್ಥೆ 2025ನೇ ಸಾಲಿನ ಬ್ಯಾಂಕ್ ಪಿಒ (ಪ್ರೊಬೇಷನರಿ ಆಫೀಸರ್) ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಈ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 1ರಿಂದ ಆರಂಭವಾಗಿದ್ದು, ಜುಲೈ 21ರವರೆಗೆ ಮುಂದುವರಿಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ibps.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಈ ಬಾರಿ ಒಟ್ಟು 5208 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, 11 ಸರ್ಕಾರಿ ಬ್ಯಾಂಕ್‌ಗಳಲ್ಲಿ ಪಿಒ ಹುದ್ದೆಗಳಿವೆ. ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಆಯ್ಕೆಗಳನ್ನು ಅರ್ಜಿಯಲ್ಲಿ ನಮೂದಿಸಬಹುದು. ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ ಪ್ರಿಲಿಮ್ಸ್, ಮೇನ್ಸ್ ಮತ್ತು ಇಂಟರ್ವ್ಯೂ.

ಆನ್‌ಲೈನ್ ಅರ್ಜಿ ಆರಂಭ: ಜುಲೈ 1, 2025

ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 21, 2025

ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 17, 23 ಮತ್ತು 24, 2025

ಮೇನ್ಸ್ ಪರೀಕ್ಷೆ: ಅಕ್ಟೋಬರ್ 12, 2025

ಯಾವ ಬ್ಯಾಂಕ್‌ನಲ್ಲಿ ಎಷ್ಟು ಹುದ್ದೆಗಳಿಗೆ ಆಹ್ವಾನ?

ಬ್ಯಾಂಕ್ ಆಫ್ ಬರೋಡಾ: 1000

ಬ್ಯಾಂಕ್ ಆಫ್ ಇಂಡಿಯಾ: 700

ಬ್ಯಾಂಕ್ ಆಫ್ ಮಹಾರಾಷ್ಟ್ರ: 1000

ಕೆನರಾ ಬ್ಯಾಂಕ್: 1000

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 500

ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 450

ಪಂಜಾಬ್ ನ್ಯಾಷನಲ್ ಬ್ಯಾಂಕ್: 200

ಪಂಜಾಬ್ & ಸಿಂಧ್ ಬ್ಯಾಂಕ್: 358

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಹೆಚ್ಚುವರಿಯಾಗಿ, IBPS PO 2025 ಅಭ್ಯರ್ಥಿಗಳು ಭಾಗವಹಿಸುವ ಬ್ಯಾಂಕುಗಳಿಗೆ ಸೇರುವ ಸಮಯದಲ್ಲಿ ಉತ್ತಮ ಕ್ರೆಡಿಟ್ ಹಿಸ್ಟರಿಯನ್ನು ಹೊಂದಿರಬೇಕು.

ಕನಿಷ್ಠ ವಯಸ್ಸು: 20 ವರ್ಷ
ಗರಿಷ್ಠ ವಯಸ್ಸು: 30 ವರ್ಷ
ಅಂದರೆ ಅಭ್ಯರ್ಥಿ 02-07-1995 ನಂತರ ಮತ್ತು 01-07-2005 ಮೊದಲೇ ಜನಿಸಿರುವಿರಬೇಕು.

ವಯೋಮಿತಿ ಸಡಿಲಿಕೆ (Age Relaxation):ಕೆಳಕಂಡ ಶ್ರೇಣಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ

ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ (ST) +5 ವರ್ಷ

ಇತರೆ ಹಿಂದುಳಿದ ವರ್ಗಗಳು ಒಬಿಸಿ (OBC) +3 ವರ್ಷ

ಅಂಗವಿಕಲ ಅಭ್ಯರ್ಥಿಗಳು +10 ವರ್ಷ

ಮಾಜಿ ಸೈನಿಕ (ECOs/SSCOs) +5 ವರ್ಷ

ಸಾಮಾನ್ಯ ಮತ್ತು ಒಬಿಸಿ(General & OBC) ವರ್ಗದ ಅರ್ಜಿದಾರರು 850 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಆದರೆ ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ(Handicapped candidate) ಅರ್ಜಿ ಶುಲ್ಕವನ್ನು 175 ರೂ.ಗೆ ನಿಗದಿಪಡಿಸಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೋಡ್‌ನಲ್ಲಿ ಪಾವತಿಸಬೇಕು.

ಆಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:IBPS ನ ಅಧಿಕೃತ ವೆಬ್‌ಸೈಟ್ ibps.in ಗೆ ತೆರಳಿ.

ಅರ್ಜಿಯ ಲಿಂಕ್ ಕ್ಲಿಕ್ ಮಾಡಿ:ಮುಖಪುಟದಲ್ಲಿ ಇರುವ “CRP PO/MT Apply Online” ಎಂಬ ಲಿಂಕ್‌ನ್ನು ಕ್ಲಿಕ್ ಮಾಡಿ.

ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ:ಹೊಸ ಬಳಕೆದಾರರಾಗಿ ನೋಂದಣಿ ಮಾಡಿ ಅಥವಾ ಲಾಗಿನ್ ಆಗಿ. ಅಗತ್ಯವಿರುವ ವೈಯಕ್ತಿಕ ಮತ್ತು ಶಿಕ್ಷಣ ಸಂಬಂಧಿತ ಮಾಹಿತಿಯನ್ನು ನಮೂದಿಸಿ.

ದಾಖಲೆಗಳನ್ನು ಅಪ್‌ಲೋಡ್ ಮಾಡಿ:ಫೋಟೋ, ಸಹಿ, ಗುರುತಿನ ಪತ್ರ ಇತ್ಯಾದಿ ದಾಖಲೆಗಳನ್ನು ನಿರ್ದಿಷ್ಟ ಗಾತ್ರ ಹಾಗೂ ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಿ.

ಅರ್ಜಿದಾರ ಶುಲ್ಕ ಪಾವತಿ ಮಾಡಿ:ಅಂತಿಮ ಹಂತವಾಗಿ, ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ ಮತ್ತು “Submit” ಬಟನ್ ಕ್ಲಿಕ್ ಮಾಡಿ.

ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ:ಭವಿಷ್ಯದ ಸಲುವಾಗಿ ಅರ್ಜಿ ಭರಿತ ಪ್ರತಿಯೊಂದನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪದವಿ ಪಡೆದ ನಂತರ ಬ್ಯಾಂಕ್ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಶುಭವಾರ್ತೆ ಇದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನಲ್ ಸೆಲೆಕ್ಷನ್ (IBPS) ಸಂಸ್ಥೆ 2025ನೇ ಸಾಲಿನ ಬ್ಯಾಂಕ್ ಪಿಒ (ಪ್ರೊಬೇಷನರಿ ಆಫೀಸರ್) ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 1ರಿಂದ ಆರಂಭವಾಗಿದ್ದು, ಜುಲೈ 21ರವರೆಗೆ ಮುಂದುವರಿಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ibps.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಈ ಬಾರಿ ಒಟ್ಟು 5208 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, 11 ಸರ್ಕಾರಿ ಬ್ಯಾಂಕ್‌ಗಳಲ್ಲಿ ಪಿಒ ಹುದ್ದೆಗಳಿವೆ. ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಆಯ್ಕೆಗಳನ್ನು ಅರ್ಜಿಯಲ್ಲಿ ನಮೂದಿಸಬಹುದು. ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ: ಪ್ರಿಲಿಮ್ಸ್, ಮೇನ್ಸ್ ಮತ್ತು ಇಂಟರ್ವ್ಯೂ.

ಆನ್‌ಲೈನ್ ಅರ್ಜಿ ಆರಂಭ: ಜುಲೈ 1, 2025

ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 21, 2025

ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 17, 23 ಮತ್ತು 24, 2025

ಮೇನ್ಸ್ ಪರೀಕ್ಷೆ: ಅಕ್ಟೋಬರ್ 12, 2025

ವಿವಿಧ ಬ್ಯಾಂಕುಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ:

ಬ್ಯಾಂಕ್ ಆಫ್ ಬರೋಡಾ: 1000

ಬ್ಯಾಂಕ್ ಆಫ್ ಇಂಡಿಯಾ: 700

ಬ್ಯಾಂಕ್ ಆಫ್ ಮಹಾರಾಷ್ಟ್ರ: 1000

ಕೆನರಾ ಬ್ಯಾಂಕ್: 1000

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 500

ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 450

ಪಂಜಾಬ್ ನ್ಯಾಷನಲ್ ಬ್ಯಾಂಕ್: 200

ಪಂಜಾಬ್ & ಸಿಂಧ್ ಬ್ಯಾಂಕ್: 358

ವಯೋಮಿತಿ ಸಡಿಲಿಕೆ (Age Relaxation):ಕೆಳಕಂಡ ಶ್ರೇಣಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ

ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ (ST) +5 ವರ್ಷ

ಇತರೆ ಹಿಂದುಳಿದ ವರ್ಗಗಳು ಒಬಿಸಿ (OBC) +3 ವರ್ಷ

ಅಂಗವಿಕಲ ಅಭ್ಯರ್ಥಿಗಳು +10 ವರ್ಷ

ಮಾಜಿ ಸೈನಿಕ (ECOs/SSCOs) +5 ವರ್ಷ

ಅರ್ಜಿಯ ಲಿಂಕ್ ಕ್ಲಿಕ್ ಮಾಡಿ:ಮುಖಪುಟದಲ್ಲಿ ಇರುವ “CRP PO/MT – Apply Online” ಎಂಬ ಲಿಂಕ್‌ನ್ನು ಕ್ಲಿಕ್ ಮಾಡಿ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!