ನರೆಗಾ ಕೂಲಿಕಾರರ ವಿಮೆ ಮಾಡಿಸಿ ಅವರ ಆಪತ್ತಿನ ಕಾಲದಲ್ಲಿ ನೆರವಾಗಿ-ಡಾ. ಗಿರೀಶ ಬದೋಲೆ
ಬೀದರ.22.ಜುಲೈ.25:- ಕೇಂದ್ರ ಸರಕಾರವು ನರೆಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಮೆ ಮಾಡಿಸಲು ಅವಕಾಶ ಮಾಡಿರುವುದರಿಂದ ನರೆಗಾ ಕೂಲಿಕಾರರ ವಿಮೆ ಮಾಡಿಸಿ ಅವರ ಆಪತ್ತಿನ ಕಾಲದಲ್ಲಿ ನೆರವಾಗಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು. ಅವರು ಸೋಮವಾರ ಬೀದರ ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಎಇಇಗಳು, ಎಡಿಗಳು, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡುತ್ತಿದ್ದರು.ಬೀದರ ಜಿಲ್ಲೆಯ ಮನರೆಗಾ ಕೂಲಿಕಾರರ ವಿಮೆ ಮಾಡಿಸಲು…
Any questions related to prajaprabhat.com?