ರಾಜ್ಯದ ಸ.ಪ್ರ.ದ ಕಾಲೇಜುಗಳ ಅತಿಥಿ ಉಪನ್ಯಾಸಕರರಿಗೆ ಕರ್ತವ್ಯದಲ್ಲಿ ಮುಂದುವರೆಸಬೇಕು: ಡಾ.ಟಿ.ದುರುಗಪ್ಪ
ಬಳ್ಳಾರಿ.03.ಜುಲೈ.25:- ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹತೆ ಹೊಂದಿದವರು. ಅನರ್ಹತೆ ಹೊಂದಿರುವರೆಂದು ತಾರತಮ್ಯ ಮಾಡದೇ ಯಥಾ ಸ್ಥಿತಿ ಕರ್ತವ್ಯದಲ್ಲಿ ಮುಂದುವರೆಸಬೇಕು. ಈಗಾಗಲೇ ಹಲವು ಅತಿಥಿ ಉಪನ್ಯಾಸಕರು ವಯೋ ನಿವೃತ್ತಿಯ ಹಂಚಿನಲ್ಲಿದ್ದಾರೆ. ಅವರು ಸೇವಾ ಭದ್ರತೆ ಇಲ್ಲದೆ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಒಂದು ವೇಳೆ ಸರ್ಕಾರ, ಯುಜಿಸಿ ನಿಯಮಾವಳಿ ಪ್ರಕಾರ ಯುಜಿಸಿ ಅರ್ಹತೆ ಹೊಂದಿದವರನ್ನು ಮಾತ್ರ ಕರ್ತವ್ಯಕ್ಕೆ ನೇಮಿಸಿಕೊಂಡರೆ, ಸಾವಿರಾರು ಜನ ಅತಿಥಿ ಉಪನ್ಯಾಸಕರ ಬದುಕು ಬೀದಿ ಪಾಲಾಗುತ್ತದೆ. ಪ್ರಸ್ತುತ ಇದುವರೆಗೆ…