ಸಂವಿಧಾನದ ಸರ್ವಶ್ರೇಷ್ಠ ಮೌಲ್ಯಗಳನ್ನು ಸಾರುವ ಕೃತಿ ‘ ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ’ — ಡಾ. ಗಿರೀಶ ಬದೋಲೆ
ಭಾರತದ ಸಂವಿಧಾನವು ವಿಶ್ವದ ಸರ್ವಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರ ಮುತ್ಸದ್ದಿ ನಾಯಕತ್ವ,ದಾರ್ಶನಿಕನ ದೂರದೃಷ್ಟಿಯನ್ನು ಒಳಗೊಂಡ ನಮ್ಮ ಸಂವಿಧಾನವು ಸರ್ವರನ್ನು ಒಳಗೊಳ್ಳುವ ಸರ್ವರ ಒಳಿತನ್ನು ಸಾಧಿಸುವ ಸಂವಿಧಾನವಾಗಿದೆ.ಇಂತಹ ಅತ್ಯುತ್ತಮ ಸಂವಿಧಾನವನ್ನು ಕೊಡುಗೆಯಾಗಿ ನೀಡುವ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ಅವರು ಭಾರತಾಂಬೆಯ ಹೆಮ್ಮೆಯ ಪುತ್ರರು ಎನ್ನಿಸಿಕೊಂಡಿದ್ದಾರೆ,ವಿಶ್ವದ ಮಹಾನ್ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ.ಭಾರತದ ಸಂವಿಧಾನ ರಚನಾ ಸಭೆಯು 1949 ರ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದ್ದರಿಂದ ಆ ನೆನಪಿಗಾಗಿ ಪ್ರತಿವರ್ಷ ನವೆಂಬರ್ 26…