09 ಡಿಸೆಂಬರ್ 24. ನ್ಯೂ ದೆಹಲಿ:- ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಇಂದು ಬಿಡುಗಡೆ ಮಾಡಿದೆ.
ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪಟ್‌ಪರ್‌ಗಂಜ್ ಕ್ಷೇತ್ರದಿಂದ ಅವಧ್ ಓಜಾ, ಮದಿಪುರದಿಂದ ರಾಖಿ ಬಿದ್ಲಾನ್, ಜನಕ್‌ಪುರಿಯಿಂದ ಪ್ರವೀಣ್ ಕುಮಾರ್ ಮತ್ತು ತಿಮಾರ್‌ಪುರ ವಿಧಾನಸಭಾ ಕ್ಷೇತ್ರದಿಂದ ಸುರೇಂದ್ರ ಪಾಲ್ ಸಿಂಗ್ ಬಿಟ್ಟು ಅವರನ್ನು ಪಕ್ಷವು ಕಣಕ್ಕಿಳಿಸಿದೆ.
ಕಳೆದ ತಿಂಗಳು ಪಕ್ಷವು ದೆಹಲಿ ವಿಧಾನಸಭಾ ಚುನಾವಣೆಗೆ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು.