08/06/2025 3:21 PM

Translate Language

Home » ಲೈವ್ ನ್ಯೂಸ್ » ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡಕ್ಕೆ ಅನುದಾನ ಬಿಡುಗಡೆ: ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡಕ್ಕೆ ಅನುದಾನ ಬಿಡುಗಡೆ: ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ

Facebook
X
WhatsApp
Telegram

ಬೆಳಗಾವಿ.06.ಜೂನ.25:- ಬೆನಿಪ್ಪಾಣಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಹೆಚ್ಚುವರಿ ತರಗತಿ ಕೊಠಡಿ ಕಟ್ಟಡಕ್ಕೆ 3 ಕೋಟಿ ಅನುದಾನ ಬಿಡುಗಡೆಯಾಗಿದ್ದು ಬೇಗಾನೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು.

ನಿಪ್ಪಾಣಿ ನಗರದಲ್ಲಿ ಈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಚ್ಚುವರಿ ತರಗತಿ ಕೊಠಡಿ, ಪ್ರಯೋಗಾಲಯ, ಮೂಲಭೂತ ಸೌಕರ್ಯ ಹಾಗೂ ಹೈ ಟೆಕ್ ಕಟ್ಟಡ,ನಿರ್ಮಾಣ ವಾಗುವುದು.

ನಿಪ್ಪಾಣಿ ನಗರಸಭೆ ವತಿಯಿಂದ 2 ಎಕರೆ ಜಾಗವನ್ನು ಬಸವೇಶ್ವರ ಪೊಲೀಸ್ ಠಾಣೆ ಎದುರಿಗೆ ಕಾಲೇಜಿಗೆ ಜಾಗ ನೀಡಿದ್ದು ಅಲ್ಲಿ ಹೈ ಟೆಕ್ ಕಾಲೇಜನು ನಿರ್ಮಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗುವುದು.

2020-21ನೇ ಸಾಲಿನಲ್ಲಿ ನಾನು ಸಚಿವೆಯಾದ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ ನಾರಾಯಣ ಅವರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿಪ್ಪಾಣಿಗೆ ಮಂಜೂರು ಮಾಡುವಂತೆ ಮನವಿ ನೀಡಲಾಗಿದ್ದು ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಬಿಜೆಪಿ ಸರ್ಕಾರವಿದ್ದಾಗ 2020-21 ಸಾಲಿನಲ್ಲಿ ಮಂಜೂರು ಆಗಿದ್ದು ಸ್ತ್ವಂತ ಕಟ್ಟಡವಿಲ್ಲದ ಕಾರಣ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ತರಗತಿ ಪ್ರಾರಂಭವಾಗಿರುತ್ತದೆ.ಈಗಿನ ಕಾಂಗ್ರೆಸ್ ಸರಕಾರದಲ್ಲಿ ಹಲವು ಬಾರಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ,ಅಧಿವೇಶನದಲ್ಲಿ ಸಚಿವರ ಗಮನ ಸೆಳೆದು ಧ್ವನಿ ಎತ್ತಿ 3 ಕೋಟಿ ಅನುದಾನ ಮಂಜೂರು ಮಾಡಿಸಿರುತ್ತೇನೆ.

ನಿಪ್ಪಾಣಿಯಲ್ಲಿ ಇಲ್ಲಿಯವರೆಗೆ ಸರ್ಕಾರಿ ಪದವಿ ಕಾಲೇಜು ಇರಲಿಲ್ಲ. ಆದರೆ ಪದವಿ ಕಾಲೇಜು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿ,ಈಗ ಅನುದಾನ ಬಿಡುಗಡೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!