08/06/2025 8:50 PM

Translate Language

Home » ಲೈವ್ ನ್ಯೂಸ್ » ರಾಜ್ಯದ ಸರ್ಕಾರಿ ಆಸ್ಪತ್ರೆ’ಗೆ, ಆರೋಗ್ಯ ಸೇವೆ ಬಗ್ಗೆ ದೂರು, ಸಮಷ್ಯ,ಸಲಹೆ ನೀಡಬೇಕೇ? ಈ ನಂಬರ್ ಗೆ ‘ವಾಟ್ಸ್ ಆಪ್’ ಮಾಡಿ

ರಾಜ್ಯದ ಸರ್ಕಾರಿ ಆಸ್ಪತ್ರೆ’ಗೆ, ಆರೋಗ್ಯ ಸೇವೆ ಬಗ್ಗೆ ದೂರು, ಸಮಷ್ಯ,ಸಲಹೆ ನೀಡಬೇಕೇ? ಈ ನಂಬರ್ ಗೆ ‘ವಾಟ್ಸ್ ಆಪ್’ ಮಾಡಿ

Facebook
X
WhatsApp
Telegram

ಬೆಂಗಳೂರು.01.ಜೂನ್.25:- ರಾಜ್ಯದಲ್ಲಿ ಸಮಣ್ಯಜನ್ ಸೇವೆಗಾಗಿ ಈಗ WhatsApp ಸೇವೆ ಪ್ರಾರಂಭ.

ನೀವು ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ಆರೋಗ್ಯ ಸೇವೆ ಸರಿಯಾಗಿ ಸಿಗ್ತಾ ಇಲ್ವ? ಈಗ ಸಮಸ್ಯೆ ಬಗ್ಗೆ ದೂರು, ಸಲಹೆ ನೀಡಲು ಆರೋಗ್ಯ ಇಲಾಖೆಯಿಂದ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆನ್ನು ಆರಂಭಿಸಲಾಗಿದೆ

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳು ಅಥವಾ ಆರೋಗ್ಯ ಸೇವೆಗಳ ಕುರಿತು ದೂರು ಅಥವಾ ಸಲಹೆ ಮಾಡಲು ವಾಟ್ಸ್ ಆಪ್ ಸಹಾಯವಾಣಿಗೆ ಕಳುಹಿಸುವಂತೆ ಮನವಿ ಮಾಡಿದೆ.

ವಾಟ್ಸ್ ಆಪ್ ಮೂಲಕ ನಮಗೆ ಮೆಸೇಜ್ ಮಾಡಿ, ಅಗತ್ಯವಿದ್ದರೇ ಪೋಟೋ, ವೀಡಿಯೋಗಳನ್ನು ಕಳುಹಿಸಿ. ನಿಮ್ಮ ಸಮಸ್ಯೆಯನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೇರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂಬುದಾಗಿ ತಿಳಿಸಿದೆ.

ಸಾರ್ವಜನಿಕರು ಆರೋಗ್ಯ ಇಲಾಖೆಯ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆ 9449843001 ಗೆ ದೂರು, ಸಲಹೆಯನ್ನು ಮಾಡಬಹುದಾಗಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಕೇವಲ ಸಂದೇಶಗಳನ್ನು ಮಾತ್ರ ಸ್ವೀಕರಿಸಲಾಗುವುದು. ದೂರವಾಣಿ ಕರೆಗಳಿಗೆ ಉತ್ತರಿಸಲಾಗುವುದಿಲ್ಲ ಎಂಬುದಾಗಿ ಹೇಳಿದೆ.

ಆರೋಗ್ಯ ಇಲಾಖೆಯಡಿ ಕುಂದುಕೊರತೆ ಪರಿಹಾರಕ್ಕೆ ವಿನೂತನ ವ್ಯವಸ್ಥೆ.
ವಾಟ್ಸಪ್ ಮೂಲಕ ನಿಮ್ಮ ಸಮಸ್ಯೆಯನ್ನು ವರದಿ ಮಾಡಿ. ಆರೋಗ್ಯ ಸೇವೆಗಳ ಸುಧಾರಣೆಗೆ ಸಹಕರಿಸಿ.#Healthcare#HealthForAll#GrievanceRedressal#WhatsApp@CMofKarnataka@dineshgrao@KarnatakaVarthepic.twitter.com/2yMGDsFJO8

– Karnataka Health Department (@DHFWKA)

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!