ಬೀದರ.30. ಮೇ.25:- ಹಕ್ ಕಾಲೋನಿ ಬೀದರದಲ್ಲಿ ರಸ್ತೆಯ ಮೇಲೆ ದಿನಾಂಕ: 23-04-2025 ರಂದು ಭಿಕ್ಷÄಕನಂತೆ ಕಾಣುವ ಅಂದಾಜು 60-65 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ರೋಗದಿಂದ ಬಳಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿರುತ್ತದೆ.
ಬೀದರನ ಮಲಗೊಂಡ ಕಾಲೋನಿ ನಿವಾಸಿಯಾದ ರಾಜಾ ಮಿಲಿಂದ ಬಾಬುರಾವ ಅವರ ಲಿಖಿತ ದೂರಿನ ಮೇರೆಗೆ ಯುಡಿಆರ್ ಸಂಖ್ಯೆ: 06/2025 ಕಲಂ.194 ಬಿಎನ್‌ಎಸ್‌ಎಸ್ ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಮೃತ ವ್ಯಕ್ತಿಯು ಅಂದಾಜು 5 ಅಡಿ 6 ಇಂಚ್ ಎತ್ತರ ಇದ್ದು, ಗೋಧಿ ಮೈಬಣ್ಣ, ಸದೃಢ ಮೈಕಟ್ಟು ಇದ್ದು, ಮೈಮೇಲೆ ಯಾವುದೇ ಬಟ್ಟೆ ಇರುವುದಿಲ್ಲ. ಬಿಳಿ ಹಾಗೂ ಕಪ್ಪು ಕೂದಲು ಹಾಗೂ ಬಿಳಿ ದಾಡಿ ಇದ್ದು, ಕೋರಳಲ್ಲಿ ಕಪ್ಪು ದಾರ ಧರಿಸಿದ್ದು ಇರುತ್ತದೆ.
ಈ ಅಪರಿಚಿತ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದು ಬಂದಲ್ಲಿ ಗಾಂಧಿಗoಜ ಪೊಲೀಸ್ ಠಾಣೆ ಬೀದರ ದೂರವಾಣಿ ಸಂಖ್ಯೆ: 08482-226233, 9480803448, ಬೀದರ ಪೊಲೀಸ್ ಉಪಾಧೀಕ್ಷಕರ ಕಛೇರಿ ದೂರವಾಣಿ ಸಂಖ್ಯೆ: 08482-226705, 9480803420, ಬೀದರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08482-226704/112 ಗೆ ಸಂಪರ್ಕಿಸಲು ಬೀದರ ಗಾಂಧಿ ಗಂಜ್ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.