08/07/2025 4:12 AM

Translate Language

Home » ಲೈವ್ ನ್ಯೂಸ್ » 4 ವರ್ಷದ ಪದವಿಯನ್ನು ಮೂರು ವರ್ಷಕ್ಕೆ 2025- 26 ನೇ ಶೈಕ್ಷಣಿಕ ಸಾಲಿನಿಂದಲೇ `SEP’ ಜಾರಿ : ಸಚಿವ ಡಾ. ಎಂ.ಸಿ. ಸುಧಾಕರ್

4 ವರ್ಷದ ಪದವಿಯನ್ನು ಮೂರು ವರ್ಷಕ್ಕೆ 2025- 26 ನೇ ಶೈಕ್ಷಣಿಕ ಸಾಲಿನಿಂದಲೇ `SEP’ ಜಾರಿ : ಸಚಿವ ಡಾ. ಎಂ.ಸಿ. ಸುಧಾಕರ್

Facebook
X
WhatsApp
Telegram

ಬೆಂಗಳೂರು.13.ಮೇ .25:- ರಾಜ್ಯ ಸರ್ಕಾರವು 2025-26ನೇ ಸಾಲಿನಿಂದಲೇ ಉನ್ನತ ಶಿಕ್ಷಣ ಇಲಾಖೆಯ SEP ಎಸ್ ಈ ಪಿ ನೀತಿ ಜಾರಿಗೊಳಿಸಲು ಚರ್ಚೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿ(SEP) ವರದಿ ಸಿದ್ದವಾಗಿದ್ದು,2025- 26 ನೇ ಸಾಲಿನಿಂದಲೇ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ರಾಜ್ಯ ಶಿಕ್ಷಣ ನೀತಿ ಆಯೋಗ ಈ ತಿಂಗಳ ಕೊನೆಯ ವಾರ ಸಭೆ ನಡೆಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಎಸ್‌ಇಪಿ NEP ವರದಿ ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ನಿರ್ಧರಿಸಲಾಗಿದ್ದು, ಮಧ್ಯಂತರ ವರದಿಯ ಶಿಫಾರಸ್ಸಿನ ಮೂಲಕ 4 ವರ್ಷದ ಪದವಿಯನ್ನು ಮೂರು ವರ್ಷಕ್ಕೆ ಕಡಿತಗೊಳಿಸಲಾಗಿದೆ. ಆಂಗ್ಲ ಭಾಷೆಯಲ್ಲಿ ಎಸ್‌ಇಪಿ ವರದಿ ತಯಾರಿಸಿದ್ದು, ಅನುವಾದ ಕಾರ್ಯ ನಡೆಯುತ್ತಿದೆ. ಬಹಳ ಎಚ್ಚರದಿಂದ ಅನುವಾದ ಮಾಡಬೇಕಿರುವುದರಿಂದ ಆಯೋಗ ಸಮಯ ಕೇಳಿದೆ. ಕೊನೆಯ ವಾರ ವರದಿ ಸಲ್ಲಿಸಲು ಆಯೋಗ ನಿರ್ಧರಿಸಿದೆ ಎಂದು ಹೇಳಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!