10/06/2025 7:50 AM

Translate Language

Home » ಲೈವ್ ನ್ಯೂಸ್ » KPSC 384 ಹುದ್ದೆಗಳ ನೇಮಕಾತಿಯ KAS ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ.

KPSC 384 ಹುದ್ದೆಗಳ ನೇಮಕಾತಿಯ KAS ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ.

Facebook
X
WhatsApp
Telegram

* ಕೋರ್ಟ್’ಗೆ ಹೋದವರಿಗೂ ಪರೀಕ್ಷೆ ಬರೆಯಲು ಅವಕಾಶ.!

ಬೆಂಗಳೂರು.26.ಏಪ್ರಿಲ್.25:- ಕೆಎಎಸ್ KAS ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಹುದ್ದೆಗಳ ನೇಮಕಾತಿ  2023 -24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆ ಪ್ರವೇಶ ಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗ ಬಿಡುಗಡೆ ಮಾಡಿದ್ದು, ಆಯೋಗದ ಜಾಲತಾಣ https://kpsc.kar.nic.inನಲಿ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಮೇ 3, 5, 7 ಮತ್ತು 9 ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಆಯೋಗದ ವೆಬ್ ಸೈಟನ್ ಲ್ಲಿ ಪ್ರಕಟಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಇದ್ದ ಭಾಷಾಂತರ ದೋಷದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ 34 ಅಭ್ಯರ್ಥಿಗಳು ಮೇ ತಿಂಗಳಲ್ಲಿ ನಡೆಯುವ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಮುಖ್ಯ ಪರೀಕ್ಷೆ ಬರೆಯಲು ಈ ಅಭ್ಯರ್ಥಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಅವಕಾಶ ಕಲ್ಪಿಸಿದ್ದು, ಅವರು ಆಯೋಗದ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಏ. 28ರೊಳಗೆ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಮುಖ್ಯ ಪರಿಕ್ಷಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

ಮುಖ್ಯ ಪರೀಕ್ಷೆಯ ಅರ್ಜಿ ನಮೂನೆಯನ್ನು ಆಯೋಗದ ಅಂತರ್ಜಾಲ https://kpsc.kar.nic.inನಲಿ..

ಅಪ್‌ಲೋಡ್ ಮಾಡಲಾಗಿದ್ದು, ಸದರಿ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಪರೀಕ್ಷಾ ಶುಲ್ಕ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೆ ರೂ. 300/- & ಇತರೆ ಅಭ್ಯಾರ್ಥಿಗಳಿಗೆ ರೂ. 500/-)ವನ್ನು ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 ಇವರ ಹೆಸರಿಗೆ ಡಿ.ಡಿ./ಐ.ಪಿ.ಓ ಪಡೆದು ದಿನಾಂಕ:28-04-2025ರ ಸಂಜೆ 5.00 ಗಂಟೆಯೊಳಗಾಗಿ ಆಯೋಗದ ಕೇಂದ್ರ ಕಛೇರಿಗೆ ಮುದ್ದಾಂ/ಅಂಚೆ ಮೂಲಕ ಅರ್ಜಿಯನ್ನು ಸಲಿ..ಸತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್‌ನಲ್ಲಿ, ಲಭ್ಯವಿರುವ ಮುಖ್ಯಪರೀಕ್ಷೆಯ

ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 2474 ಇ(1)/2024-25, ದಿನಾಂಕ: 13-02-2025ಅನ್ನು ಓದಿಕೊಳ್ಳತಕ್ಕದ್ದು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!