ಬೀದರ.17.ಏಪ್ರಿಲ್.25: -ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲ್ಲಿ ಏಪ್ರಿಲ್.19 ರಂದು ಜನ ಸಂಪರ್ಕ ಸಭೆ ಹಾಗೂ ಕೆಇಆರ್‌ಸಿಯ (ಎಸ್.ಒ.ಪಿ.) ಮಾನದಂಡಗಳನ್ನು ಕುರಿತು ಅರಿವು ಮೂಡಿಸುವಿಕೆ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಇಂಜಿನಿಯರರು(ವಿ)/ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಗುವಿಸಕಂನಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುತ್ತದೆ ಎಂದು ಬೀದರ ಕಾಂiÀið ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಗಳ ವಿವರ: ಏಪ್ರಿಲ್.19 ರಂದು ಬೆಳಿಗ್ಗೆ 11 ಗಂಟೆಗೆ ಔರಾದ(ಬಿ) ಉಪ ವಿಭಾಗ ಕಛೇರಿಯಲ್ಲಿ, ಬೀದರ (ನಗರ) ಉಪ ವಿಭಾಗ ಕಛೇರಿಯಲ್ಲಿ, ಬೀದರ (ಗ್ರಾಮೀಣ) ಉಪ ವಿಭಾಗ ಕಛೇರಿಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಭಾಲ್ಕಿ ಉಪ ವಿಭಾಗ ಕಛೇರಿಯಲ್ಲಿ ಮತ್ತು ಕಮಠಾಣ ಉಪ ವಿಭಾಘ ಕಛೇರಿಯಲ್ಲಿ ಸಭೆಗಳು ನಡೆಯಲಿವೆ.
ಕಾರಣ ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಈ ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.