07/08/2025 7:31 PM

Translate Language

Home » ಲೈವ್ ನ್ಯೂಸ್ » ಜಗತ್ತು ಕಂಡ ಜ್ಞಾನಸೂರ್ಯ ಡಾ.ಅಂಬೇಡ್ಕರರವರು–ಎಸ್.ಎಮ್.ಜನವಾಡಕರ್

ಜಗತ್ತು ಕಂಡ ಜ್ಞಾನಸೂರ್ಯ ಡಾ.ಅಂಬೇಡ್ಕರರವರು–ಎಸ್.ಎಮ್.ಜನವಾಡಕರ್

Facebook
X
WhatsApp
Telegram


ಬೀದರ.16.ಏಪ್ರಿಲ್.14. ಸಂವಿಧಾನಶಿಲ್ಪಿ, ಭಾರತರತ್ನ, ಡಾ.ಅಂಬೇಡ್ಕರ್‌ರವರು ಜಗತ್ತು ಕಂಡ ಮಹಾಜ್ಞಾನಿಯಾಗಿದ್ದರು ಎಂದು ಹಿರಿಯ ಸಾಹಿತಿಗಳಾದ ಶ್ರೀ ಎಸ್.ಎಂ.ಜನವಾಡಕರ್‌ರವರು ಹೇಳಿದರು.
ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರ ಜಯಂತಿಯ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.


ಭಾರತ ದೇಶದ ಘನತೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಶ್ರೇಯಸ್ಸು ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಸಲ್ಲುತ್ತದೆ. ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರು ತಮ್ಮ ಸತತ ಕಠಿಣ ಪರಿಶ್ರಮ, ಅಪಾರ ಜ್ಞಾನ, ಹೋರಾಟದಿಂದ ಇಡೀ ಜಗತ್ತಿಗೆ ಮಾದರಿಯಾದ ಮಹಾಪುರುಷರು. ಡಾ.ಬಾಬಾ ಸಾಹೇಬರು ಜ್ಞಾನದ ಭಂಡಾರವಾಗಿ ಜ್ಞಾನಸೂರ್ಯರಾದರು.

ಅವರೊಬ್ಬ ಗ್ರಂಥಾಲಯವಾಗಿದ್ದರು ಎಂಬುದಕ್ಕೆ ಅವರ ಬರಹ ಹಾಗೂ ಭಾಷಣಗಳೆ ಸಾಕ್ಷಿಯಾಗಿವೆ. ಅತ್ಯಂತ ಕೆಳಸ್ತರದಿಂದ ಬಂದoತಹ ಅವರು ಸಾಧಿಸಿದ ಉತ್ತುಂಗ ಶಿಖರ ಎಲ್ಲರಿಗೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದರು.


ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿAಗ ಸಾವಳಗಿಯವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರು ಭಾರತ ದೇಶಕ್ಕೆ ಒಂದು ಅಮೂಲ್ಯ ವರದಾನ. ಬೃಹತ್ ಪ್ರಜಾಪ್ರಭುತ್ವದ ಆಡಳಿತವು ಸುಸೂತ್ರವಾಗಿ ನಡೆದಿರುವುದು ಡಾ.ಬಾಬಾಸಾಹೇಬರು ನೀಡಿದ ಸಂವಿಧಾನದಿAದ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ಮಾತನಾಡುತ್ತ ದೀನ, ದುರ್ಬಲರಿಗೆ ಸ್ವಾತಂತ್ರö್ಯ ಹಾಗೂ ಸಮಾನತೆ ದೊರೆತದ್ದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರವರು ನೀಡಿರುವ ಸಂವಿಧಾನದಿoದ. ಅವರ ಸಂವಿಧಾನದಿAದಾಗಿ ನಮಗೆ ಶಿಕ್ಷಣ, ಸಮಾನತೆ, ಅಭಿವ್ಯಕ್ತಿ, ಮತದಾನ ಮುಂತಾದ ಹಕ್ಕುಗಳು ನಮಗೆ ದೊರೆತಿವೆ. ಅವರ ಆಶಯದಂತೆ ನಮಗೆ ಹಕ್ಕು ಪಡೆಯುವಂತೆ ಜವಾಬ್ದಾರಿಗಳೂ ಸಹ ಇರುತ್ತವೆ ಎಂಬುದನ್ನು ಮರೆಯಬಾರದು ಎಂದರು


ಪ್ರಸ್ತಾವಿಕ ಮಾತನಾಡಿದ ಬೀದರ ವಿಶ್ವವಿದ್ಯಾಲಯದ ಕುಲಸಚಿವರು ಆಡಳಿತ ಸುರೇಖಾ ಕೆ.ಎ.ಎಸ್. ಡಾ.ಬಾಬಾಸಾಹೇಬರವರಂತಹ ಅಪ್ರತಿಮ ಜ್ಞಾನಿಯನ್ನು ಜಗತ್ತಿಗೆ ನೀಡಿದ ಭಾರತ ದೇಶ ನಿಜವಾಗಿಯೂ ಧನ್ಯವಾಗಿದೆ. ಅವರ ಪರಿಶ್ರಮ, ಪ್ರತಿಭೆ, ಹೋರಾಟದ ಜೀವನ ಆದರ್ಶಮಯವಾಗಿದೆ. ವಿಧ್ಯಾರ್ಥಿಗಳು ಅವರ ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದo ಅಧ್ಯಯನವನ್ನು ಇಂದಿನ ಯುವಕರು ಪಾಲಿಸಬೇಕಾಗಿದೆ ಎಂದರು.


ಕಾರ್ಯಕ್ರಮಕ್ಕೂ ಮೊದಲು ಬೀದರ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಆಡಳಿತವರ್ಗ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಣದೂರವರೆಗೆ ಪಾದಯಾತ್ರೆ ಕೈಗೊಂಡು ಅಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿ ಪ್ರತಿಮೆಯ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆಯನ್ನು ಪಠಿಸಿದರು. ನಂತರ ಡಾ.ಅಂಬೇಡ್ಕರ್‌ರವರ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ಪರ್ಧೆಗಳ ವಿಜೇತರಿಗೆ ವೇದಿಕೆಯ ಗಣ್ಯರು ಬಹುಮಾನಗಳನ್ನು ವಿತರಿಸಿದರು.


ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಿವನಾಥ ಎಂ.ಪಾಟೀಲ, ಕು.ವೈಷ್ಣವಿ ಪಾಟೀಲ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ. ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ.ವಿ.ಗಬಾಡಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD