ಬೀದರ.15.ಏಪ್ರಿಲ್.25:- ರಾಷ್ಟ್ರೀಯ ಹೆದ್ದಾರಿ ಬೀದರ್-ಔರಾದ್ ನಡುವೆ ಕೌಠಾ ಸೇತುವೆ ಬಳಿ ನಿರ್ಮಿಸಲಾಗುತ್ತಿರುವ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವೀಕ್ಷಣೆ ಮಾಡಿದರು.
ರಾಷ್ಟೀಯ ಹೆದ್ದಾರಿಯಲ್ಲಿ ಈ ರೀತಿ ಬ್ರಿಜ್ ಕಂ ಬ್ಯಾರೇಜ್ ಆಗುತ್ತಿರುವುದು ಇದು ದೇಶದಲ್ಲೇ ಮೊದಲು ಆಗಿದೆ.
₹ 36 ಕೋಟಿ ವೆಚ್ಚದ ಈ ಕಾಮಗಾರಿ ಬಹುತೇಕ ಪೂರ್ಣ ಆಗಿದೆ. ಈ ಬ್ಯಾರೇಜ್‌ನಿಂದ ಔರಾದ್ ಹಾಗೂ ಬೀದರ್ ತಾಲ್ಲೂಕಿನ ಅನೇಕ ಗ್ರಾಮಗಳ ರೈತರ ಹೊಲಗಳಿಗೆ ಹಾಗೂ ಬೇಸಿಗೆ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗಲಿದೆ ಎಂದು ಖೂಬಾ ಹೇಳಿದರು.
ಈ ಬ್ರಿಜ್ ಕಂ ಬ್ಯಾರೇಜ್ ನದಿಗೆ ಅಡ್ಡಲಾಗಿ 325 ಮೀಟರ್ ಉದ್ದದಲ್ಲಿ ನಿರ್ಮಿಸಲಾಗಿದೆ. ಅಣೆಕಟ್ಟು 6.1 ಮೀಟರ್ ಎತ್ತರವಿದ್ದು, ಮೇಲಿಂದ ಬರುವ ನೀರು ಇಲ್ಲಿ ಸಂಗ್ರಹವಾಗುತ್ತದೆ ಎಂದರು.
ಈಗಾಗಲೇ ಬೀದರ್ -ಔರಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣ ಆಗಿದ್ದು, ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ. ಈ ಮಹತ್ವದ ಕಾರ್ಯ ಕೈಗೆತ್ತಿಕೊಳ್ಳಲು ಪ್ರಧಾನಿ ಮೋದಿ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಸಹಕಾರ ಎಂದೂ ಮರೆಯಲಾಗದು ಎಂದು ಹೇಳಿದರು.
ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್, ಮಂಡಲ ಅಧ್ಯಕ್ಷ ದೀಪಕ ಗಾದಗಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಶಿವಪ್ರಕಾಶ, ರಮೇಶ, ರಾಜೇಂದ್ರ, ಸೂರಜಸಿಂಗ್ ಠಾಕೂರ್, ಪ್ರಕಾಶ ಕೋಳಿ, ನಾಗೇಂದ್ರ ಪಾಟೀಲ್, ನಾಗಶೆಟ್ಟಿ, ಶಿವಾನಂದ ಮಡಿವಾಳ ಇದ್ದರು.