19/04/2025 7:52 PM

Translate Language

Home » ಲೈವ್ ನ್ಯೂಸ್ » ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.!

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.!

Facebook
X
WhatsApp
Telegram

ಬೀದರ.08.ಏಪ್ರಿಲ್.25:-ಪ್ರಸಕ್ತ ಶೈಕ್ಷಣಿಕ ಸಾಲಿನ 2024-25 ರ ದ್ವಿತೀಯ ಪಿ.ಯು.ಸಿ ಪರೀಕ್ಷೆ -1 ರಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ಬೀದರ್. ಪ್ರತಿಶತ ಫಲಿತಾಂಶ ಲಭಿಸಿದೆ.

1) ವಿಜ್ಞಾನ ವಿಭಾಗದಲ್ಲಿ 99.44%

2) ಕಲಾವಿಭಾಗದಲ್ಲಿ- 97% ಮತ್ತು

3) ವಾಣಿಜ್ಯ ವಿಭಾಗದಲ್ಲಿ – 98%….

ಫಲಿತಾಂಶ ಬಂದಿದ್ದು, ಒಟ್ಟು 75 % ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಆರವ ತಂದೆ ಸಂಜಯ್ ದೇಶಮುಖ್ 97.16% ಪ್ರತಿಶತ ಫಲಿತಾಂಶ ಪಡೆದು ಬೀದ‌ರ್ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ,

ವಿಜ್ಞಾನ ವಿಭಾಗದಲ್ಲಿ ನೀಲಭ ತಂದೆ ರಾಜೇಶ್ ಕುಮಾರ್ ದುಬೆ 94.5 % ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ,

ಕಲಾ ವಿಭಾಗದಲ್ಲಿ ಬಲರಾಮ್ ತಂದೆ ಜಗನ್ನಾಥ 95% ಪ್ರತಿಶತ ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಜ್ಞಾನಸುಧಾ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಲಭಿಸಿದಕ್ಕೆ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ//ಪೂರ್ಣಿಮಾ ಜಾರ್ಜ್, ನಿರ್ದೇಶಕರಾದ ಡಾ//ಮುನೇಶ್ವರ ಲಾಖಾ, ಪ್ರಾಂಶುಪಾಲರಾದ ಚೆನ್ನವೀರ ಪಾಟೀಲ ಹಾಗೂ ವಿಜ್ಞಾನ ವಿಭಾಗದ ಶೈಕ್ಷಣಿಕ ನಿರ್ದೇಶಕರಾದ ಶ್ರೀಕಾಂತ್ ರೆಡ್ಡಿ ಮತ್ತು ಸುಜಾತ ಬೊಮ್ಮಾರೆಡ್ಡಿ, ಮತ್ತು ಉಪನ್ಯಾಸಕರ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!