2024-25ನೇ ಹಣಕಾಸು ವರ್ಷದಲ್ಲಿ ಭಾರತವು ಒಂದು ಸಾವಿರ 681 ಲೋಕೋಮೋಟಿವ್ಗಳನ್ನು ಉತ್ಪಾದಿಸುವ ಮೂಲಕ ಅಮೆರಿಕ ಮತ್ತು ಯುರೋಪ್ ಅನ್ನು ಹಿಂದಿಕ್ಕಿದೆ.
ಹಿಂದಿನ 2023-24ನೇ ಹಣಕಾಸು ವರ್ಷದಲ್ಲಿ ಉತ್ಪಾದಿಸಲಾದ 1,472 ಲೋಕೋಮೋಟಿವ್ಗಳಿಗೆ ಹೋಲಿಸಿದರೆ ಇದು ಶೇಕಡಾ 19 ರಷ್ಟು ಹೆಚ್ಚಳವಾಗಿದೆ ಎಂದು ರೈಲ್ವೆ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ದಾಖಲೆಯ ಉತ್ಪಾದನೆಯು ದೇಶದಲ್ಲಿ ಲೋಕೋಮೋಟಿವ್ ಉತ್ಪಾದನೆಗೆ ಇದುವರೆಗಿನ ಅತ್ಯಧಿಕವಾಗಿದೆ, ಇದು ರೈಲ್ವೆ ಮೂಲಸೌಕರ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಎಲ್ಲಾ ಘಟಕಗಳ ಗಮನಾರ್ಹ ಸಾಧನೆಗಳನ್ನು ಪ್ರತಿಬಿಂಬಿಸುತ್ತದೆ.
2014 ರಿಂದ ಹತ್ತು ವರ್ಷಗಳಲ್ಲಿ 9,168 ಲೋಕೋಮೋಟಿವ್ಗಳನ್ನು ಉತ್ಪಾದಿಸುವ ಮೂಲಕ ಲೋಕೋಮೋಟಿವ್ ಉತ್ಪಾದನೆಯು ಗಮನಾರ್ಹ ಏರಿಕೆಯನ್ನು ಕಂಡಿದೆ ಎಂದು ಅದು ಹೇಳಿದೆ, ಇದು ವಾರ್ಷಿಕ ಸರಾಸರಿಯನ್ನು ಸರಿಸುಮಾರು 917 ಕ್ಕೆ ಏರಿಸಿದೆ.