ಬೀದರ.29.ಮಾರ್ಚ.25: – ಎನ್.ಹೆಚ್.ಎಂ./ PH-ABHIM ಯೋಜನೆಯಡಿಯಲ್ಲಿ ಜಿಲ್ಲಾ ಆಸ್ಪತ್ರೆ ವ್ಯವಸ್ಥಾಪಕರ-1, ಶುಶ್ರೂಷಕಿ (ಮಕ್ಕಳ ಆರೋಗ್ಯ, ತಾಯಿ ಆರೋಗ್ಯ ಮತ್ತು PH-ABHIM )-28, ನೇತ್ರ ಸಹಾಯಕರು-1, ಕಿರಿಯ ಆರೋಗ್ಯ ಸಹಾಯಕ/ಆರೋಗ್ಯ ನೀರಿಕ್ಷಣಾಧಿಕಾರಿ-14, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ-1 ಹಾಗೂ ಪ್ರಯೋಗ ಶಾಲಾ ತಂತ್ರಜ್ಞರ-7 ಹುದ್ದೆಗಳಿಗೆ ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವವರು ದಿನಾಂಕ: 06-04-2025 ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆಂದು ಅವರು ತಿಳಿಸಿದ್ದಾರೆ.