09/06/2025 4:14 AM

Translate Language

Home » ಲೈವ್ ನ್ಯೂಸ್ » ಜೇಸ್ಕಾಂ: ಕುಂದು ಕೊರತೆ ನಿವಾರಣಾ ಸಭೆ ಮಾ.15ಕ್ಕೆ

ಜೇಸ್ಕಾಂ: ಕುಂದು ಕೊರತೆ ನಿವಾರಣಾ ಸಭೆ ಮಾ.15ಕ್ಕೆ

Facebook
X
WhatsApp
Telegram

ಬೀದರ.13ಮಾರ್ಚ.25:- ಜೇಸ್ಕಾಂ ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಹುಮನಾಬಾದ, ಮನ್ನಾಏಖೇಳ್ಳಿ ಹಾಗೂ ಬಸವಕಲ್ಯಾಣ, ಉಪ ವಿಭಾಗಗಳಲ್ಲಿ ಮಾರ್ಚ.15 ರಂದು ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆಯನ್ನು ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಗುವಿಸಕಂನಿ ಹುಮನಾಬಾದ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ ಎಂದು ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಭೆಯ ವಿವರ: ಮಾರ್ಚ.15 ರಂದು ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಹುಮನಾಬಾದ ಉಪ ವಿಭಾಗದ ಗ್ರಾಮೀಣ ಶಾಖೆ ಕಛೇರಿಯಲ್ಲಿ, ಮನ್ನಾಏಖೇಳ್ಳಿ ಉಪ ವಿಭಾಗದ ಮನ್ನಾಏಖೇಳ್ಳಿ ಶಾಖೆ ಕಛೇರಿಯಲ್ಲಿ ಹಾಗೂ ಬಸವಕಲ್ಯಾಣ ಉಪ ವಿಭಾಗದ ಮುಚಳಂಬ ಶಾಖೆ ಕಛೇರಿಯಲ್ಲಿ ಸಭೆಗಳು ನಡೆಯಲಿವೆ.


ಕಾರಣ ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಈ ಸಭೆಯಲ್ಲಿ ಉಪಸ್ಥಿತರಿದ್ದು ಕುಂದು ಕೊರತೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!