ಬೀದರ.10.ಮಾರ್ಚ.25:- ಬೀದರ್ ಜಿಲ್ಲೆಯಲ್ಲಿ ದಿನಾಂಕ: 01-03-2025 ರಂದು ನಡೆದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭಾನಡುವಳಿ ಆದೇಶದಂತೆ ಔರಾದ ಮತ್ತು ಕಮಲನಗರ ತಾಲ್ಲೂಕಿನ ಸಂತಪೂರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 36 ಅಂಗನವಾಡಿ ಕಾರ್ಯಕರ್ತೆ ಹಾಗೂ 44 ಸಹಾಯಕಿಯರ ಹುದ್ದೆಗಳಿಗೆ ದಿನಾಂಕ: 26-12-2024 ರಿಂದ 05-01-2025 ರವರೆಗೆ ಅಪೂರ್ಣಗೊಂಡ ಅರ್ಜಿ ಪೂರ್ಣಗೊಳಿಸಲು ಕಾಲಾವಕಾಶ ನೀಡಿದ್ದ ವೇಳೆಯಲ್ಲಿ ಅರ್ಜಿ ಪೂರ್ಣಗೊಳಿಸಿದ ಅಭ್ಯರ್ಥಿಗಳ ಮರು ತಾತ್ಕಾಲಿಕ ಪಟ್ಟಿ ದಿನಾಂಕ; 07-03-2025 ರಂದು ಕಛೇರಿ ನಾಮಫಲಕದಲ್ಲಿ ಪ್ರಕಟಣೆಗೊಳಿಸಿದ್ದು, ಈ ಮರು ತಾತ್ಕಾಲಿಕವಾಗಿ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಗೆ ದಿನಾಂಕ: 07-03-2025 ರಿಂದ 15-03-2025 ರವರೆಗೆ ಸಾರ್ವಜನಿಕರು ಆಕ್ಷೇಪಣೆ ಇದ್ದಲ್ಲಿ ಕಛೇರಿಯ ವೇಳೆಯಲ್ಲಿ ಸಲ್ಲಿಸಬಹುದಾಗಿದೆ ಎಂದು ಔರಾದ (ಬಾ) ತಾಲ್ಲೂಕಿನ ಸಂತಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
