ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಬರೋಬರಿ 9935 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ನೇಮಕಾತಿ ನಿಯಮಗಳನ್ನು ಸಿದ್ಧಪಡಿಸಿಕೊಂಡಿದ್ದು, ಈ ಕುರಿತು ಇದೀಗ ರಾಜ್ಯಪತ್ರ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಸದ್ಯದಲ್ಲೇ ಈ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯ ನೋಟಿಫಿಕೇಶನ್ ಬಿಡುಗಡೆ ಆಗುವ ಎಲ್ಲ ಸಾಧ್ಯತೆಗಳು ಇವೆ. ನೀವು ಸರ್ಕಾರಿ ಉದ್ಯೋಗಾಸಕ್ತರಾಗಿದ್ದಲ್ಲಿ, ಯಾವೆಲ್ಲ ಹುದ್ದೆ ಎಷ್ಟಿವೆ ನೋಡಿ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧ, ಕರ್ನಾಟಕ ರಾಜ್ಯಪತ್ರದ ಮುಖೇನ ನೇಮಕಾತಿ ಪ್ರಕ್ರಿಯೆಯ ಕುರಿತ ಸಂಪೂರ್ಣ ನಿಯಮಾವಳಿಗಳ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. 9000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕರಡು ಅಧಿಸೂಚನೆಯನ್ನು 2024 ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಇದೀಗ ವಿವಿಧ ಹುದ್ದೆಗಳ ನೇಮಕಾತಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮ ನಿಯಮಗಳ ನೋಟಿಫಿಕೇಶನ್ ಅನ್ನು ರಾಜ್ಯಪತ್ರದಲ್ಲಿ ಬಿಡುಗಡೆ ಮಾಡಲಾಗಿದೆ.ರರು
ಸಾವಿರಾರು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ, ಕೆಲವು ಹುದ್ದೆಗಳನ್ನು ಬಡ್ತಿ ಮೂಲಕ, ಇನ್ನೂ ಕೆಲವು ಹುದ್ದೆಗಳನ್ನು ಕೇಂದ್ರ ಸೇವೆಗಳ ಮೂಲಕ ಪಡೆಯುವ ಕುರಿತು ರಾಜ್ಯಪತ್ರದಲ್ಲಿ ಹೇಳಿರುವುದು ಲಭ್ಯವಾಗಿದೆ. ಯಾವೆಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಈ ರಾಜ್ಯಪತ್ರದಲ್ಲಿ ತಿಳಿಸಲಾಗಿದೆ ಎಂಬುದನ್ನು ಕೆಳಗಿನಂತೆ ಓದಿಕೊಳ್ಳಿ.

ಉನ್ನತ ಶಿಕ್ಷಣ ಇಲಾಖೆಯಿಂದ 9,935 ಹುದ್ದೆಗಳ ನೇಮಕ: ಯಾವ ಹುದ್ದೆ ಎಷ್ಟಿವೆ?.. ಡೀಟೇಲ್ಸ್ ಇಲ್ಲಿದೆ..
ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಬರೋಬರಿ 9935 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ನೇಮಕಾತಿ ನಿಯಮಗಳನ್ನು ಸಿದ್ಧಪಡಿಸಿಕೊಂಡಿದ್ದು, ಈ ಕುರಿತು ಇದೀಗ ರಾಜ್ಯಪತ್ರ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಸದ್ಯದಲ್ಲೇ ಈ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯ ನೋಟಿಫಿಕೇಶನ್ ಬಿಡುಗಡೆ ಆಗುವ ಎಲ್ಲ ಸಾಧ್ಯತೆಗಳು ಇವೆ. ನೀವು ಸರ್ಕಾರಿ ಉದ್ಯೋಗಾಸಕ್ತರಾಗಿದ್ದಲ್ಲಿ, ಯಾವೆಲ್ಲ ಹುದ್ದೆ ಎಷ್ಟಿವೆ ನೋಡಿ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯಿಂದ ಭರ್ಜರಿ ಜಾಬ್ ಆಫರ್.
ಬರೋಬರಿ 9 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ.
ಯಾವ ಹುದ್ದೆ ಎಷ್ಟಿವೆ ಎಂದು ಇಲ್ಲಿದೆ ಮಾಹಿತಿ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧ, ಕರ್ನಾಟಕ ರಾಜ್ಯಪತ್ರದ ಮುಖೇನ ನೇಮಕಾತಿ ಪ್ರಕ್ರಿಯೆಯ ಕುರಿತ ಸಂಪೂರ್ಣ ನಿಯಮಾವಳಿಗಳ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.
9000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕರಡು ಅಧಿಸೂಚನೆಯನ್ನು 2024 ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ವಿವಿಧ ಹುದ್ದೆಗಳ ನೇಮಕಾತಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮ ನಿಯಮಗಳ ನೋಟಿಫಿಕೇಶನ್ ಅನ್ನು ರಾಜ್ಯಪತ್ರದಲ್ಲಿ ಬಿಡುಗಡೆ ಮಾಡಲಾಗಿದೆ.
ಬಹುಸಂಖ್ಯಾತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ, ಕೆಲವು ಹುದ್ದೆಗಳನ್ನು ಬಡ್ತಿ ಮೂಲಕ, ಇನ್ನೂ ಕೆಲವು ಹುದ್ದೆಗಳನ್ನು ಕೇಂದ್ರ ಸೇವೆಗಳ ಮೂಲಕ ಪಡೆಯುವ ಕುರಿತು ರಾಜ್ಯಪತ್ರದಲ್ಲಿ ಹೇಳಿರುವುದು ಲಭ್ಯವಾಗಿದೆ. ಯಾವೆಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಈ ರಾಜ್ಯಪತ್ರದಲ್ಲಿ ತಿಳಿಸಲಾಗಿದೆ ಎಂಬುದನ್ನು ಕೆಳಗಿನಂತೆ ಓದಿಕೊಳ್ಳಿ.
ನೇಮಕಾತಿ ಇಲಾಖೆ ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ
ಹುದ್ದೆಗಳ ಹೆಸರು
ಪ್ರಾಂಶುಪಾಲರು,
ಮುಖ್ಯಸ್ಥರು,
ಆಯುಕ್ತರು,
ನಿರ್ದೇಶಕರು,
ಉಪನ್ಯಾಸಕರು,
ಎಫ್‌ಡಿಎ,
ಎಸ್‌ಡಿಎ,
ಗ್ರೂಪ್ ಸಿ,
ಗ್ರೂಪ್ ಡಿ ಹಲವು ಹುದ್ದೆಗಳು.
ಒಟ್ಟು ಹುದ್ದೆಗಳ ಸಂಖ್ಯೆ 9935
ವೇತನ ಶ್ರೇಣಿ Rs.27,000- 2,18,200 ವರೆಗೆ.
ಹುದ್ದೆಗಳ ವಿವರ
ಆಯುಕ್ತರು : 1
ತಾಂತ್ರಿಕ ಶಿಕ್ಷಣ ನಿರ್ದೇಶಕರು : 1
ಹೆಚ್ಚುವರಿ ತಾಂತ್ರಿಕ ಶಿಕ್ಷಣ ನಿರ್ದೇಶಕರು (ಇಸಿ) : 1
ಹೆಚ್ಚುವರಿ ತಾಂತ್ರಿಕ ಶಿಕ್ಷಣ ನಿರ್ದೇಶಕರು (ಪಾಲಿಟೆಕ್ನಿಕ್) : 1
ಜಂಟಿ ನಿರ್ದೇಶಕರು (ಅಡ್ಮಿನ್): 1
ಜಂಟಿ ನಿರ್ದೇಶಕರು ತಾಂತ್ರಿಕ ಶಿಕ್ಷಣ: 2
ಡೆಪ್ಯೂಟಿ ಡೈರೆಕ್ಟರ್ (ಇಸಿ): 1
ತಾಂತ್ರಿಕ ಶಿಕ್ಷಣ (ಪಾಲಿಟೆಕ್ನಿಕ್) ಡೆಪ್ಯೂಟಿ ಡೈರೆಕ್ಟರ್ (ಇಸಿ): 6
ಪ್ರಿನ್ಸಿಪಾಲ್ (ಜಿಇಸಿ) : 9
ಪ್ಲೇಸ್‌ಮೆಂಟ್ ಅಂಡ್ ಟ್ರೈನಿಂಗ್ ಆಫೀಸರ್: 9
ಪ್ರೊಫೇಸರ್ (ಇಸಿ): 58
ಅಸಿಸ್ಟಂಟ್ ಡೈರೆಕ್ಟರ್ ಆಫ್ ಟೆಕ್ನಿಕಲ್ ಎಜುಕೇಷನ್ (ಇಸಿ): 2
ಅಸಿಸ್ಟಂಟ್ ಡೈರೆಕ್ಟರ್ ಆಫ್ ಟೆಕ್ನಿಕಲ್ ಎಜುಕೇಷನ್ (ಪಾಲಿಟೆಕ್ನಿಕ್): 13
ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್ (ಇಂಜಿನಿಯರಿಂಗ್): 75
ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್ ( ನಾನ್ ಇಂಜಿನಿಯರಿಂಗ್): 6
ಅಸೋಸಿಯೇಟ್ ಪ್ರೊಫೆಸರ್ (ಇಸಿ): 131
ಹೆಡ್ (ಡಿಪಾರ್ಟ್‌ಮೆಂಟ್ ಇಂಜಿನಿಯರಿಂಗ್ / ಟೆಕ್ನಾಲಜಿ) : 333
ಹೆಡ್ (ನಾನ್ ಇಂಜಿನಿಯರಿಂಗ್, ಸರ್ಕಾರಿ ಪಾಲಿಟೆಕ್ನಿಕ್): 24
ಹೆಡ್ ಆಫ್ ಡಿಪಾರ್ಟ್‌ಮೆಂಟ್ – ಮಾನವಿಕ ಮತ್ತು ವಿಜ್ಞಾನ: 427
ಆಡಳಿತಾತ್ಮಕ ಅಧಿಕಾರಿ: 01
ಅಸಿಸ್ಟಂಟ್ ಪ್ರೊಫೆಸರ್ ಇಂಜಿನಿಯರಿಂಗ್ ಕಾಲೇಜುಗಳು : 359
ಲೈಬ್ರರಿಯನ್ ಇಂಜಿನಿಯರಿಂಗ್ ಕಾಲೇಜುಗಳು: 10
ಅಸಿಸ್ಟಂಟ್ ಡೈರೆಕ್ಟರ್ ಆಫ್ ಫಿಸಿಕಲ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್: 9
ಇಂಜಿನಿಯರಿಂಗ್ ವಿಷಯಗಳ ಉಪನ್ಯಾಸಕರು : 2042
ನಾನ್ – ಇಂಜಿನಿಯರಿಂಗ್ ಉಪನ್ಯಾಸಕರು : 125
ಮಾನವಿಕ ಮತ್ತು ವಿಜ್ಞಾನ ವಿಷಯಗಳ ಉಪನ್ಯಾಸಕರು: 14
ಅಕೌಂಟ್ ಆಫೀಸರ್: 3
ಟೆಕ್ನಿಕಲ್ ಆಫೀಸರ್ : 12
ಪ್ರೋಗ್ರಾಮರ್ : 1
ಪ್ರಾಂಶುಪಾಲರು, ಜೂನಿಯರ್ ಟೆಕ್ನಿಕಲ್ ಸ್ಕೂಲ್ಸ್: 6
ಲೈಬ್ರರಿಯನ್ (ಗ್ರೂಪ್ ಬಿ): 1
ಸ್ಟ್ಯಾಟಿಸ್ಟೀಷಿಯನ್ : 1
ಕ್ಯಾಮೆರಾಮನ್: 1
ಸೌಂಡ್ ರೆಕಾರ್ಡಿಸ್ಟ್: 1
ಅಸೋಸಿಯೇಟ್ ಪ್ರೊಫೆಸರ್: 131
ಮುಖ್ಯಸ್ಥ (ನಾನ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗ) : 24
ಸೂಪರಿಂಟೆಂಡೆಂಟ್: 281
ಫೋರ್‌ಮ್ಯಾನ್ : 91
ಗ್ರಂಥಾಪಾಲಕರು: 31
ಇನ್‌ಸ್ಟ್ರಕ್ಟರ್: 459
ಪ್ರಥಮ ದರ್ಜೆ ಸಹಾಯಕರು: 512
ಸ್ಟೆನೋಗ್ರಾಫರ್: 22
ಅಸಿಸ್ಟಂಟ್ ಇನ್‌ಸ್ಟ್ರಕ್ಟರ್: 487
ಮೆಕ್ಯಾನಿಕ್ಸ್ : 923
ಸೆಕೆಂಡ್ ಡಿವಿಷನ್ ಅಸಿಸ್ಟಂಟ್: 474
ಡಾಟಾ ಎಂಟ್ರಿ ಅಸಿಸ್ಟಂಟ್: 144
ಡ್ರೈವರ್: 89
ಸಹಾಯಕರು: 1241
ಆಫೀಸ್ ಅಟೆಂಡರ್: 164
ಹೆಡ್ ಕುಕ್( ಹಾಸ್ಟೆಲ್): 21
ಗ್ರೂಪ್ ಡಿ (ಜವಾನ, ವಾಚ್‌ಮ್ಯಾನ್, ಸ್ವೀಪರ್‌ಗಳು): 939
ಅಸಿಸ್ಟಂಟ್ ಕುಕ್: 21
ಮೇಲಿನ ಹುದ್ದೆಗಳು ಮಾತ್ರವಲ್ಲದೇ ಇನ್ನು ಕೆಲವು ಹುದ್ದೆಗಳು ಸೇರಿ ಒಟ್ಟಾರೆ 9935 ಹುದ್ದೆಗಳ ಭರ್ತಿಗೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದಾದ್ಯಂತ ಇರುವ ಉನ್ನತ ಶಿಕ್ಷಣ ಇಲಾಖೆ ಅಧೀನದ ಕಾಲೇಜುಗಳು, ಕಚೇರಿಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಎಲ್ಲ ಹುದ್ದೆಗಳನ್ನು ಸಹ ನೇರ ನೇಮಕಾತಿ ಮಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆದರೆ ಉಪನ್ಯಾಸಕರು, ಎಫ್‌ಡಿಎ, ಎಸ್‌ಡಿಎ, ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆಗಳ ಸಾಧ್ಯತೆ ಹೆಚ್ಚಿದ್ದು, ಸದರಿ ಹುದ್ದೆಗಳಿಗೆ ಅರ್ಹತೆ ಇರುವವರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಿ.
ಸರ್ಕಾರ ಎಲ್ಲಾ ಹುದ್ದೆ ತಕ್ಷಣವೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.