ಬೀದರ.25.ಫೆಬ್ರುವರಿ.25: ಪುರಸಭೆ ಹಳ್ಳಿಖೇಡ (ಬಿ) ವರ್ಷ 2025-26ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ ಸಂಬಂಧ ಮೊದಲನೆ ಸುತ್ತಿನ ಪೂರ್ವಭಾವಿ ಸಾರ್ವಜನಿಕ ಸಭೆಯನ್ನು ಮಾರ್ಚ.4 ರಂದು ಮಧ್ಯಾಹ್ನ 3.30 ಗಂಟೆಗೆ ಪುರಸಭೆ ಸಭೆ ಸಭಾಂಗಣದಲ್ಲಿ ಜರುಗಲಿದೆ ಎಂದು ಹಳ್ಳಿಖೇಡ (ಬಿ) ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಳ್ಳಿಖೇಡ (ಬಿ) ಪಟ್ಟಣದ ನೊಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೊಂದಾಯಿತ ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳು, ಇತರೆ ಸಂಘ ಸಂಸ್ಥೆಗಳು ಪ್ರತಿನಿಧಿಗಳು, ಪಟ್ಟಣದ ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಸದರಿ ಸಭೆಯಲ್ಲಿ ಭಾಗವಹಿಸಿ ಬಜೆಟ್ ವಿಷಯ ಸಂಬಂಧ ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.