09/06/2025 9:42 AM

Translate Language

Home » ಲೈವ್ ನ್ಯೂಸ್ » ಬೀದರ 27 ರಂದು ಲೋಕಾಯುಕ್ತ ಅಹವಾಲು ಸಭೆ

ಬೀದರ 27 ರಂದು ಲೋಕಾಯುಕ್ತ ಅಹವಾಲು ಸಭೆ

Facebook
X
WhatsApp
Telegram

ಬೀದರ.24.ಫೆಬ್ರುವರಿ.25: -ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಠಾಣೆ ವತಿಯಿಂದ ಫೆಬ್ರುವರಿ.27 ರಂದು ಬೆಳಿಗ್ಗೆ 11.30 ಗಂಟೆಯಿಂದ 14 :00 ಗಂಟೆಯವರೆಗೆ ಔರಾದ (ಬಾ) ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 15 :30 ರಿಂದ 17 :30 ಗಂಟೆಯವರೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೀದರದಲ್ಲಿ ಸಾರ್ವಜನಿಕ ಕುಂದುಕೊರತೆ/ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ನಿರೀಕ್ಷಕರು-4 ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ದಿನಾಂಕದಂದು, ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಬಂದು ಸಲ್ಲಿಸಲು ಹಾಗೂ ಸ್ಥಳದಲ್ಲಿಯೇ ದೂರು ಅರ್ಜಿಯ ಫಾರಂ ನಂ: 1 ಮತ್ತು 2 ತೆಗೆದುಕೊಂಡು ದೂರು ನೀಡಲು ಅನುಕೂಲ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಡಿಎಸ್‍ಪಿ ರವರ ಮೊ.ಸಂ-9364062571 ಮತ್ತು ಪಿಐ-4 ರವರ ಮೊ.ಸಂ-9364062675, ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!