09/06/2025 10:07 PM

Translate Language

Home » ಲೈವ್ ನ್ಯೂಸ್ » ಬೀದರ|ಫೆ.15 ರಂದು ಉದ್ಯೋಗ ಮೇಳ

ಬೀದರ|ಫೆ.15 ರಂದು ಉದ್ಯೋಗ ಮೇಳ

Facebook
X
WhatsApp
Telegram

ಬೀದರ.13.ಫೆಬ್ರುವರಿ.15: -ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೀದರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಛೇರಿ ಬೀದರ ಇವರ ಸಹಯೋಗದೊಂದಿಗೆ ಫೆಬ್ರುವರಿ.15 ರಂದು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಆವರಣ ಮನ್ನಳ್ಳಿ ರಸ್ತೆ ಬೀದರದಲ್ಲಿ ಡಿಡಿಯು-ಜಿಕೆವೈ ಮತ್ತು ಸಂಕಲ್ಪ ಯೋಜನೆಯಡಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಬೀದರ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು (ಡಿಆರ್‍ಡಿಎ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸದರಿ ಮೇಳದಲ್ಲಿ ವಿವಿಧ ರೀತಿಯ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಸ್ಥಳೀಯ ಉದ್ಯೋಗದಾತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.  ಕಾರಣ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ (ಪಿಜಿ), ಐಟಿಐ, ಡಿಪ್ಲೋಮಾ, ಬಿಇ ಮತ್ತು ಫಾರ್ಮಸಿ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!