ಔರಾದ (ಬಾ) 09.ಫೆ.25.ಬೀದರ ಜಿಲ್ಲೆಯ ಔರಾದ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆಹೆರು ಯುವ ಕೇಂದ್ರ ಬೀದರ್ ಹಾಗೂ ಸುಭಾಸ್ ಚಂದ್ರ ಭೋಸ್ ಯುವಕ ಸಂಘದ ವತಿಯಿಂದ ಫೆ.10 ಮತ್ತು 11 ರಂದು ಔರಾದ ತಾಲೂಕು ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.
ಯುವಕರ ವಿಭಾಗದಲ್ಲಿ ವಾಲಿಬಾಲ್, ಶಟಲ್, ಬ್ಯಾಡ್ಮಿಂಟನ್, ವೇಟ್ ಲಿಫ್ಟಿಂಗ್, ಯುವತಿಯರ ವಿಭಾಗದಲ್ಲಿ 100 ಮಿ, ಓಟ, ಸ್ಲೋ ಸೈಕಲಿಂಗ್, ಖೋ ಖೋ ಸ್ಪರ್ಧೆಗಳು ನಡೆಯಲಿವೆ.15 ರಿಂದ 29 ವರ್ಷದ ವಯೋಮಿತಿ ಯುವಕ ಯುವತಿಯರು ಭಾಗವಹಿಸಬಹುದು, ಮಾಹಿತಿ ಮತ್ತು ನೋಂದಣಿಗೆ ಮೊ.9740462695,ಅಥವಾ 8123893746 ಗೆ ಸಂಪರ್ಕಿಸುವಂತೆ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ ತಿಳಿಸಿದ್ದಾರೆ.