04/08/2025 12:54 AM

Translate Language

Home » ಲೈವ್ ನ್ಯೂಸ್ » ಉಪನ್ಯಾಸಕರ ಅಭಾವ: ಫಲಿತಾಂಶ ಕುಸಿತದ ಆತಂಕ ಅತಿಥಿ ಉಪನ್ಯಾಸಕರನ್ನು ನಿಯೋಜಿಸಿ, ಪಠ್ಯಕ್ರಮ ಬೋಧಣೆ ಮಾಡಿ.!

ಉಪನ್ಯಾಸಕರ ಅಭಾವ: ಫಲಿತಾಂಶ ಕುಸಿತದ ಆತಂಕ ಅತಿಥಿ ಉಪನ್ಯಾಸಕರನ್ನು ನಿಯೋಜಿಸಿ, ಪಠ್ಯಕ್ರಮ ಬೋಧಣೆ ಮಾಡಿ.!

Facebook
X
WhatsApp
Telegram

ಬೆಳಗಾವಿ, 08.ಫೆ.25:- ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೂರ್ಣಕಾಲಿಕ ಉಪನ್ಯಾಸಕರು 330, ಖಾಲಿ ಇರುವ ಉಪನ್ಯಾಸಕರ ಹುದ್ದೆ 327.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 30, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 31 ಸೇರಿದಂತೆ ಇಡೀ ಜಿಲ್ಲೆಯಲ್ಲಿ 61 ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯಗಳಿವೆ.ಇಲ್ಲಿ ಮಂಜೂರಾದ 657 ಹುದ್ದೆಗಳ ಪೈಕಿ ಅರ್ಧದಷ್ಟು ಹುದ್ದೆ ಖಾಲಿ ಇರುವುದರಿಂದ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ.

ವರ್ಗಾವಣೆ, ಸೇವಾನಿವೃತ್ತಿ ಮತ್ತಿತರ ಕಾರಣದಿಂದ ಪ್ರತಿವರ್ಷ ಉಪನ್ಯಾಸಕರ ಹುದ್ದೆ ಖಾಲಿಯಾಗುತ್ತಲೇ ಇವೆ. ಆದರೆ, ತೆರವಾದ ಹುದ್ದೆ ಭರ್ತಿಗೆ ಸರ್ಕಾರ ಮನಸ್ಸು ಮಾಡದಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

50,732 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿದಂತೆ 343 ಪಿಯು ಕಾಲೇಜುಗಳಿವೆ. 2024-25ನೇ ಸಾಲಿನ ಪಿಯು ದ್ವಿತೀಯ ವರ್ಷದ ಪರೀಕ್ಷೆ ಮಾರ್ಚ್‌ 1ರಿಂದ 22ರ ವರೆಗೆ ನಡೆಯಲಿವೆ. ಬೆಳಗಾವಿಯಲ್ಲಿ 21,517, ಚಿಕ್ಕೋಡಿಯಲ್ಲಿ 29,215 ಸೇರಿದಂತೆ ಜಿಲ್ಲೆಯಾದ್ಯಂತ 50,732 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಈ ಸಲದ ಪರೀಕ್ಷೆಯಲ್ಲಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಉಪನ್ಯಾಸಕರು ಪ್ರಯತ್ನ ನಡೆಸಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಗಮನಹರಿಸಲು ವಿಶೇಷ ತರಗತಿ ಸಂಘಟಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ಪ್ರಾಚಾರ್ಯರು ಮತ್ತು ವಿಷಯವಾರು ಉಪನ್ಯಾಸಕರ ಸಭೆ, ಸರಣಿ ಪರೀಕ್ಷೆ, ಗುಂಪುಚರ್ಚೆ ಮತ್ತಿತರ ಚಟುವಟಿಕೆ ನಡೆಯುತ್ತಿವೆ.

ಉತ್ತಮ ಭೌತಿಕ ಸೌಕರ್ಯ ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರು ಲಭ್ಯವಿರುವ ಕಾರಣ, ಅನುದಾನಿತ ಮತ್ತು ಅನುದಾನರಹಿತ ಕಾಲೇಜಿನವರಿಗೆ ಪರೀಕ್ಷಾ ಸಿದ್ಧತೆ ಹೆಚ್ಚಿನ ಸಮಸ್ಯೆಯಾಗುತ್ತಿಲ್ಲ.

ಪ್ರತಿಬಾರಿ ಪರೀಕ್ಷೆಯಲ್ಲೂ ಅವರು ಒಂದಿಷ್ಟು ಸಾಧನೆ ಮೆರೆಯುತ್ತ ಬಂದಿದ್ದಾರೆ. ಆದರೆ, ಸರ್ಕಾರಿ ಕಾಲೇಜಿನವರಿಗೆ ಪೂರ್ಣಕಾಲಿಕ ಉಪನ್ಯಾಸಕರ ಅಭಾವವೇ ಅಡ್ಡಿಯಾಗಿದೆ.

ಫಲಿತಾಂಶ ಕುಸಿತದ ಆತಂಕ: 2022-23ನೇ ಸಾಲಿನ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ 25ನೇ ಸ್ಥಾನ ಪಡೆದಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ 2023-24ರಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು. 2022-23ರಲ್ಲಿ 16ನೇ ಸ್ಥಾನ ಗಳಿಸಿದ್ದ ಚಿಕ್ಕೋಡಿ, 15ನೇ ಸ್ಥಾನಕ್ಕೇರಿತ್ತು.

ಈ ಬಾರಿ ಎರಡೂ ಶೈಕ್ಷಣಿಕ ಜಿಲ್ಲೆಗಳು ಫಲಿತಾಂಶ ಸುಧಾರಣೆಯತ್ತ ಚಿತ್ತ ಹರಿಸಿವೆ. ಆದರೆ, ದೊಡ್ಡ ಸಂಖ್ಯೆಯಲ್ಲಿರುವ ಉಪನ್ಯಾಸಕರ ಕೊರತೆಯಿಂದ ಮತ್ತೆ ಫಲಿತಾಂಶ ಕುಸಿಯುವ ಆತಂಕ ಎದುರಾಗಿದೆ.

ಪೂರ್ಣಕಾಲಿಕ ಉಪನ್ಯಾಸಕರ ಕೊರತೆ ಇರುವಲ್ಲಿ ಅತಿಥಿ ಉಪನ್ಯಾಸಕರನ್ನು ನಿಯೋಜಿಸಿ, ಪಠ್ಯಕ್ರಮ ಬೋಧಣೆ ಪೂರ್ಣಗೊಳಿಸಿದ್ದೇವೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ‘ಪೂರ್ಣಕಾಲಿಕ ಉಪನ್ಯಾಸಕರು ಇಲ್ಲದ್ದರಿಂದ ಕಲಿಕೆಗೆ ಪೆಟ್ಟು ಬೀಳುತ್ತಿರುವುದು ನಿಜ.

ಸಕಾಲಕ್ಕೆ ಅತಿಥಿ ಉಪನ್ಯಾಸಕರನ್ನೂ ನಿಯೋಜಿಸಿಕೊಳ್ಳದ ಕಾರಣ, ಶೈಕ್ಷಣಿಕ ಚಟುವಟಿಕೆ ವೇಳಾಪಟ್ಟಿ ಪ್ರಕಾರ ನಡೆದಿಲ್ಲ’ ಎನ್ನುವ ಆರೋಪವೂ ಕೇಳಿಬರುತ್ತಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!