ಬೀದರ.02ಫೆಬ್ರುವರಿ.25: ಬೀದರ್ ಜಿಲ್ಲೆಯಲ್ಲಿ ಹಾಲಿ ಇರುವ 22/110/11ಕೆವಿ ಹಲಬರ್ಗಾ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊಸದಾಗಿ ನಿರ್ಮಿಸಿರುವ 220/110/11ಕೆವಿ ಸಂತಪುರ ವಿದ್ಯುತ್ ಸ್ವೀಕರಣಾ ಕೇಂದ್ರದವರೆಗೆ ನಿರ್ಮಿಸಿರುವ 28.084 ಕಿ.ಮೀ. ಉದ್ದದ 220ಕೆವಿ ವಿದ್ಯುತ್ ಮಾರ್ಗವು ಭಾಲ್ಕಿ ತಾಲ್ಲೂಕಿನ ಮಳಚಾಪುರ, ಸೇವಾನಗರ, ಹಾಲಹಿಪ್ಪರಗಾ, ಕೋಸಮ, ನಾಗೂರ (ಕೆ), ಶಾಖೆಂಪುರ, ಚಂದಾಪುರ, ಗೋರನಾಳ ಮತ್ತು ಹಾಜನಾಳ ಮತ್ತು ಔರಾದ ತಾಲ್ಲೂಕಿನ ಹೆಡಗಾಪುರ ಮತ್ತು ನಾಗರೂ (ಬಿ) ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿರುತ್ತದೆ ಮತ್ತು ಹೊಸದಾಗಿ ನಿರ್ಮಿಸಿರುವ 220/110/11ಕೆವಿ ಸಂತಪುರ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಹೊಗುತ್ತಿರುವ 110ಕೆವಿ ವಿದ್ಯುತ್ ಮಾರ್ಗಗಳು ನಾಗೂರ(ಬಿ), ಮಸ್ಕಲ ಮತ್ತು ಚಟನಾಳ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿರುತ್ತದೆ.
ಈ ವಿದ್ಯುತ್ ಮಾರ್ಗಗಳಲ್ಲಿ ದಿನಾಂಕ: 02-02-2025 ರಂದು ಅಥವಾ ತದನಂತರ ಯಾವುದೇ ದಿನಾಂಕದಂದು ವಿದ್ಯುತ್ ಹರಿಸಲಾಗುವುದು.
ಕಾರಣ ಸಾರ್ವಜನಿಕರು ವಿದ್ಯುತ್ ಗೋಪುರಕ್ಕೆ ಹತ್ತುವುದಾಗಲಿ ಅಥವಾ ಅದಕ್ಕೆ ದನ ಕರುಗಳನ್ನು ಕಟ್ಟುವುದಾಗಲಿ, ಹಸಿರು ಟೊಂಗೆಗಳನ್ನು ವಿದ್ಯುತ್ ಲೈನಿಗೆ ಎಸೆಯುವುದು ಪ್ರಾಣಕ್ಕೆ ಅಪಾಯವಿರುತ್ತದೆ.
ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರೂ ಎಸಗಿದ್ದಲ್ಲಿ ಮುಂದೆ ಆಗುವ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲವೆಂದು ಬೀದರ ಕವಿಪ್ರನಿನಿ ಕಾರ್ಯನಿರ್ವಾಹಕ ಅಭಿಯಂತರರು(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.