ಬೀದರ.24.ಜನವರಿ.25:- ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಮತ್ತು ಹುಮನಾಬಾದ ರೈಲು ನಿಲ್ದಾಣಗಳ ಮಧ್ಯ ಕೆಮ್ ನಂ. 49/7-8 ನೇದ್ದರಲ್ಲಿ ದಿನಾಂಕ: 22=12-2024 ರಂದು ಬೆಳಿಗ್ಗೆ 9.40 ಗಂಟೆಗೆ ಸುಮಾರು 45 ವಯಸ್ಸಿನ ಅಪರಿಚಿತ ಗಂಡು ಮನುಷ್ಯನ ಮೃತದೇಹವು ಪತ್ತೆಯಾಗಿದ್ದು ಈವರೆಗೆ ಮೃತನ ವಾರಸುದಾರರು ಯಾರೆಂದು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ ಎಂದು ಬೀದರ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ರೈಲು ನಿಲ್ದಾಣದ DY. S.S.SC RLY ಬೀದರ ಅವರ ಲಿಖಿತ ದೂರಿನನ್ವಯ ಬೀದರ ರೈಲ್ವೆ ಪೊಲೀಸ್ ಠಾಣೆಯ ಯುಡಿಆರ್ ಸಂ. 34/2024 ಕಲಂ 194 ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಮೃತ ವ್ಯಕ್ತಿಯು 5 ಫೀಟ್ 6 ಇಂಚ್ ಎತ್ತರ ಇದ್ದು, ಅಗಲವಾದ ಹಣೆ, ಸಧೃಡ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ ಕಪ್ಪು ಉದ್ದನೆಯ ಕೂದಲು, ಮುಖದ ಮೇಲೆ ಉದ್ದನೆಯ ಗಡ್ಡ ಮತ್ತು ಮೀಸೆ ಇದ್ದು, ಮೇಮೇಲೆ ಒಂದು ಕಪ್ಪು ಬಣ್ಣದ ಜಾಕೇಟ್, ಒಂದು ಕಪ್ಪು ಬಣ್ಣದ ಪ್ಯಾಂಟ್, ಒಂದು ಕಂದು ಬಣ್ಣದ ಅಂಡರವೇರ, ಬೂದು ಬಣ್ಣದ ರೌಡ್ ನೇಕ್ ಟಿ-ಶರ್ಟಧರಿಸಿರುತ್ತಾನೆ.
ಈ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಯಾರಾದರೂ ಇದ್ದಲ್ಲಿ ಅಥವಾ ವಾರಸುದಾರರ ಬಗ್ಗೆ ಯಾರಿಗಾದರು ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಪೊಲೀಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೀದರ ಅಥವಾ ದೂರವಾಣಿ ಸಂಖ್ಯೆ: 08482-226389, ಮೊಬೈಲ್ ಸಂಖ್ಯೆ: 9480802133, 7483095508, 7-19384645 ಗೆ ಸಂಪರ್ಕಿಸುವAತೆ ಅವರು ಕೋರಿದ್ದಾರೆ.