ಬೀದರ.22.ಜನವರಿ.25:-:- ಬೀದರ ವಿಶ್ವವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್ ಸ್ನಾತಕೋತ್ತರ ಪದವಿ ವಿಷಯಗಳಿಗೆ ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದ್ದು, ವಿಶ್ವವಿದ್ಯಾಲಯದ ಆವರಣದಲ್ಲಿ ಉಳಿದಿರುವ ಪ್ರಥಮ ಸೆಮಿಸ್ಟರ್ ಸ್ನಾತಕೋತ್ತರ ಪದವಿಗಳ ಹಾಗೂ ಸಂಯೋಜಿತ ಕಾಲೇಜುಗಳ ಸ್ನಾತಕೋತ್ತರ ಪದವಿಗಳ ಉಳಿದ ಸೀಟುಗಳಿಗೆ ಪರಿಷ್ಕೃತ ಅಧಿಸೂಚನೆ 6 ರಂತೆ ಅಂತಿಮವಾಗಿ ಅರ್ಜಿ ಕರೆಯಲಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಧಿಯ ದಿನಾಂಕ: 23-01-2025 ರಿಂದ 28-01-2025 ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ದಿನಾಂಕ: 28-01-2025 ರ ಸಂಜೆ 5.30 ರೊಳಗಾಗಿ ಬೀದರ ವಿಶ್ವವಿದ್ಯಾಲಯದ ಆವರಣದಲ್ಲಿ ಅಥವಾ ಸಂಯೋಜಿತ ಕಾಲೇಜುಗಳಲ್ಲಿ ಸಲ್ಲಿಸುವುದು. ಪ್ರವೇಶ ಪಡೆಯುವ ದಿನಾಂಕ ಮೆರಿಟ್ ಆಧಾರಿತ 29-01-2025 ಮತ್ತು 31-01-2025 ಆಗಿರುತ್ತದೆ.
ವಿಶ್ವವಿದ್ಯಾಲಯ ಆವರಣದಲ್ಲಿ ಕಲಾ ವಿಷಯಗಳಾದ ಕನ್ನಡ, ಇಂಗ್ಲೀಷ, ಉರ್ದು, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಮಾಜಕಾರ್ಯ ಹಾಗು ಮಹಿಳಾ ಅಧ್ಯಯನ ವಿಭಾಗಗಳಲ್ಲಿ ಸೀಟು ಲಭ್ಯತೆ ಇರುತ್ತದೆ. ಅದೇ ರೀತಿ ವಿಜ್ಞಾನ ವಿಭಾಗದಲ್ಲಿ ಗಣಿತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಹಾಗು ಭೌತಶಾಸ್ತ್ರ, ಲಭ್ಯತೆ ಇರುತ್ತದೆ.
ಸಂಯೋಜಿತ ಕಾಲೇಜುಗಳಲ್ಲಿಯೂ ಸೀಟು ಲಭ್ಯತೆ ಇದ್ದು ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶ ನೀಡಿದ್ದು, ಪ್ರವೇಶಾತಿ ಸೌಲಭ್ಯ ಪಡೆಯಲು ಸೂಚಿಸಿದ ಖಾಲಿ ಉಳಿದಿರುವ ಸೀಟುಗಳ ವಿವರ ಹಾಗೂ ಅರ್ಜಿ ಶುಲ್ಕದ ವಿವರಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲದಿAದ (https://bidaruniversity.ac.in). UUCMS ಈ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
—