ಬೀದರ 19.ಜನವರಿ.25:- ನಗರದಲ್ಲಿ ಜರುಗುತ್ತಿರುವ ಪಶು ವಿವಿಯ ಜಾನುವಾರು ಕುಕ್ಕುಟ ಹಾಗೂ ಮೀನುಗಾರಿಕೆ ಮೇಳದ ಎರಡನೆಯ ದಿನ ಅಪಾರ ಜನಸ್ತೋಮ ಪಾಲ್ಗೊಂಡಿತ್ತು. ಸುಮಾರು 40 ಸಾವಿರಕ್ಕಿಂತಲೂ ಹೆಚ್ಚುಜಿಲ್ಲೆಯ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು, ರೈತರು ಹಾಗೂ ನಗರದ ಪ್ರಾಣಿ ಪ್ರಿಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇಂದು ಸುಮಾರು 10 ಜಿಲ್ಲೆಯ ಶ್ರೇಷ್ಠ ರೈತ ಹಾಗೂ ಶ್ರೇಷ್ಠ ಮಹಿಳೆಯರಿಗೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮ ಪ್ರಶಸ್ತಿ ಪ್ರಧಾನ ಮಾಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಇಲ್ಲಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯ ಕೇವಲ ಜಿಲ್ಲೆಗಷ್ಟೇ ಸೀಮಿತವಲ್ಲ ಅದು ಇಡೀ ದೇಶದ ವೈಜ್ಞಾನಿಕ ಬೆಳವಣಿಗೆಗೆ ಸಹಕಾರಿ.
ಜಿಲ್ಲೆಯ ಜನರು ಅದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಜೀವನಾಧಾರವನ್ನು ಉತ್ಕೃಷ್ಟಗೊಳಿಸಬೇಕು ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರಗತಿಪರ ರೈತರನ್ನ ಗುರುತಿಸಿ ಸನ್ಮಾನಿಸುತ್ತಿರುವುದು ವಿಶ್ವವಿದ್ಯಾಲಯ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇಲ್ಲಿರುವ ಅಲಂಕಾರಿಕ ಮೀನುಗಾರಿಕೆಯ ಮತ್ಸಲೋಕ ಅತ್ಯಂತ ಆಕರ್ಷಣೀಯವಾಗಿದ್ದು ಜಾನುವಾರುಗಳನ್ನು ಹಾಗೂ ಕೋಳಿಗಳು ಕೂಡ ನಮ್ಮ ವಿದ್ಯಾರ್ಥಿಗಳು ನೋಡಲಿ ಎಂದರು.
ಈ ಸಂದರ್ಭದಲ್ಲಿ ಇದಕ್ಕೆ ಸಹಕಾರ ನೀಡಿದ ಎಲ್ಲಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಸನ್ಮಾನ್ಯ ಕುಲಪತಿಗಳಾದ ಪ್ರೊಫೆಸರ್ ಕೆ ಸಿ ವೀರಣ್ಣ ಸನ್ಮಾನಿಸಿ ಅಭಿನಂದಿಸಿದರು.