ಬೀದರ 16.ಜನವರಿ.25:- ಬೀದರನ ಹೊಕ್ರಾಣಾ ಗ್ರಾಮದ ನಿವಾಸಿಯಾದ ಅಶ್ವಿನಿ ಶೇಶಿಧರ ಮಾಡಿವಾಳ (19 ವರ್ಷ) ಇವರು ದಿನಾಂಕ: 09-01-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾರೆ.
ಕಾಣೆಯಾದ ಮಹಿಳೆಯು 5 ಅಡಿ ಎತ್ತರ ಇದ್ದು, ತಿಳಿ ಮೈಬಣ್ಣ ಹೊಂದಿದ್ದು, ನೋಡಲು ಉದ್ದ ಮುಖ, ನೇರ ಮೂಗು, ಸಾಧಾರಣ ಮೈಕಟ್ಟು ಇದ್ದು, ಮೈಮೇಲೆ ನೀಲಿ ಬಣ್ಣದ ಟಾಪ್, ಬೂದಿ ಬಣ್ಣದ ಲಗಿನ, ಬೂದಿ ಬಣ್ಣದ ಸ್ವೇಟರ ಧರಿಸಿರುವ ಇವರು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ.
ಈ ಕಾಣೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಮನ್ನಳ್ಳಿ ಪೊಲೀಸ್ ಠಾಣೆಗೆ ಅಥವಾ ಸರ್ಕಲ್ ಆಫೀಸ್ ದೂರವಾಣಿ (226707), ಡಿಪಿಓ (226705), (08742-263601) ಗೆ ಸಂಪರ್ಕಿಸುವಂತೆ ಬೀದರ ಮನ್ನಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.