04/08/2025 8:07 PM

Translate Language

Home » ಲೈವ್ ನ್ಯೂಸ್ » ದಲಿತ ಸಮುದಾಯ ಮಾಜಿ ಶಾಸಕರು ಹಾಗು ಹಾಲಿ ಶಾಸಕರ ಸಭೆ ಮಾಡಲು ಬ್ರೇಕ.!

ದಲಿತ ಸಮುದಾಯ ಮಾಜಿ ಶಾಸಕರು ಹಾಗು ಹಾಲಿ ಶಾಸಕರ ಸಭೆ ಮಾಡಲು ಬ್ರೇಕ.!

Facebook
X
WhatsApp
Telegram

ರಾಜ್ಯ ಮುಖ್ಯಮಂತ್ರಿಯ ಸಿದ್ಧರಾಮಯ್ಯ ನಂತರ ನೆಸ್ಟ್ ಮುಖ್ಯಮಂತ್ರಿ ಯಾರು ಅಂತಾ ದಲಿತ ಮುಖ್ಯಮಂತ್ರಿ ಸಚಿವ ಡಾ ಜಿ ಪರಮೇಶ್ವರ್‌ ನೇತೃತ್ವದಲ್ಲಿ ದಲಿತ ಸಮುದಾಯ ಮಾಜಿ ಶಾಸಕರು ಹಾಗು ಹಾಲಿ ಶಾಸಕರ ಸಭೆ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ದೆಹಲಿಯಲ್ಲಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌, ಸುರ್ಜೇವಾಲಗೆ ದೂರು ಕೊಡುವ ಮೂಲಕ ದಲಿತ ಸಮುದಾಯದ ಸಭೆಗೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಗಿದ್ದರು.

ಆ ಬಳಿಕ ದಲಿತ ಸಮುದಾಯದ ನಾಯಕರು ಹೈಕಮಾಂಡ್‌ ಹಾಗು ಡಿ.ಕೆ ಶಿವಕುಮಾರ್‌ ವಿರುದ್ಧ ಸಿಡಿಮಿಡಿಗೊಂಡಿದ್ದರು. ಆ ಬಳಿಕ ಡಿ.ಕೆ ಶಿವಕುಮಾರ್‌ ವಿರೋಧಿ ಬಣ ಸಮಾಧಾನ ಆಗುವ ಕ್ರಮವೊಂದು ಹೈಕಮಾಂಡ್‌ ಮೂಲಕ ಆಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮುಗಿಯದ ಅಸಮಾಧಾನ ಎನ್ನುವಂತಾಗಿದೆ. ಒಬಿಸಿ ಘಟಕದಲ್ಲಿ ಭುಗಿಲೆದ್ದ ಅಸಮಧಾನ, ಒಬಿಸಿ ಘಟಕದ ನೂತನ ಅಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಒಬಿಸಿ ಅಧ್ಯಕ್ಷರನ್ನಾಗಿ ಡಿ.ಟಿ ಶ್ರೀನಿವಾಸ್ ಅವರನ್ನು ನೇಮಕ ಮಾಡಿದ್ದ ಡಿ.ಕೆ ಶಿವಕುಮಾರ್‌ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷರನ್ನಾಗಿ ಡಿ.ಕೆ ಶಿವಕುಮಾರ್‌ ಮಾಡಿದ್ದ ನೇಮಕಕ್ಕೆ ತಡೆ ಕೊಟ್ಟಿದೆ ಹೈಕಮಾಂಡ್‌. ಆಪ್ತರಿಗೆ ಪಕ್ಷದ ಹುದ್ದೆ ಕೊಡಿಸುವಲ್ಲಿ ಡಿ.ಕೆ ಶಿವಕುಮಾರ್‌ ಪ್ರಯತ್ನಕ್ಕೆ ಹಿನ್ನಡೆ ಆಗಿದೆ. ಡಿ.ಟಿ ಶ್ರೀನಿವಾಸ್ ನೇಮಕಕ್ಕೆ ತಡೆ ನೀಡಿ ಎಐಸಿಸಿ ಓಬಿಸಿ ಅಧ್ಯಕ್ಷ ಅಜಯ್ ಸಿಂಗ್ ಯಾದವ್ ಆದೇಶ ಮಾಡಿದ್ದಾರೆ.

ಕಾಂಗ್ರೆಸ್ ಒಬಿಸಿ ನಾಯಕರು ಹೈಕಮಾಂಡ್‌ ನಾಯಕರಿಗೂ ದೂರು ನೀಡಿದ್ದರು. ಶಾಸಕ ಬೇಳೂರು ಗೋಪಾಲಕೃಷ್ಣ, ಎಂಎಲ್‌ಸಿ ನಾಗರಾಜ್ ಯಾದವ್ ದೂರು ನೀಡಿದ್ದರು. ಆ ಬಳಿಕ ನಿನ್ನೆ ಸುರ್ಜೇವಾಲಾಗೂ ದೂರು ಸಲ್ಲಿಸಿದ್ದರು ಒಬಿಸಿ ನಾಯಕರು. ಕೇಂದ್ರ ಒಬಿಸಿ ಅಧ್ಯಕ್ಷರಿಗೂ ಈ ಬಗ್ಗೆ ದೂರು ಸಲ್ಲಿಸಿದ್ದ ಶಾಸಕರು.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಶ್ರೀನಿವಾಸ್‌ ಅವರನ್ನು ನೇಮಕ ಮಾಡಲಾಗಿತ್ತು. ಡಿ.ಕೆ ಶಿವಕುಮಾರ್‌ ನಿರ್ಧಾರ ಕೆಪಿಸಿಸಿ ಹಿಂದುಳಿದ ವರ್ಗಗಳ ಶಾಸಕರ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಜೆಪಿಯಿಂದ ವಲಸೆ ಬಂದವರಿಗೆ ಅಧ್ಯಕ್ಷರನ್ನಾಗಿ ಮಾಡಿದ್ದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಶಾಸಕರ ದೂರಿನ ಆಧಾರದ ಮೇಲೆ ಶ್ರೀನಿವಾಸ್ ನೇಮಕ ಪೆಂಡಿಂಗ್ ಇಡಲಾಗಿದೆ. ಎಐಸಿಸಿ ಒಬಿಸಿ ಘಟಕದ ಅಧ್ಯಕ್ಷರಿಂದ ಡಿ.ಕೆ ಶಿವಕುಮಾರ್‌ಗೆ ಪತ್ರ ಬರೆದಿದ್ದು, ನೀವು ಮಲ್ಲಿಕಾರ್ಜುನ ಖರ್ಗೆಯವರ ಒಪ್ಪಿಗೆ ಪಡೆಯದೆ ಏಕಾಏಕಿ ಅಧ್ಯಕ್ಷರನ್ನ ನೇಮಕ ಮಾಡಿದ್ದೀರ. ಹಾಗಾಗಿ ಎಐಸಿಸಿ ಅಧ್ಯಕ್ಷರ ಅನುಮತಿ ಇಲ್ಲದೆ ನೇಮಕ ಮಾಡುವುದು ಅಸಿಂಧು. ಆ ಕಾರಣಕ್ಕೆ ನೇಮಕವನ್ನ ನಾವು ಪೆಂಡಿಂಗ್ ಇಟ್ಟಿದ್ದೇವೆಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ರಾಜ್ಯದಲ್ಲಿ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD