09/06/2025 2:52 PM

Translate Language

Home » ಲೈವ್ ನ್ಯೂಸ್ » ಬೀದರ ಜಿಲ್ಲೆ. ಬ್ಯಾಟರಿ ಚಾಲಿತ ವಿಲ್ಹ್ಚೇರ ಯೋಜನೆಯಡಿ ಅರ್ಜಿ ಆಹ್ವಾನ

ಬೀದರ ಜಿಲ್ಲೆ. ಬ್ಯಾಟರಿ ಚಾಲಿತ ವಿಲ್ಹ್ಚೇರ ಯೋಜನೆಯಡಿ ಅರ್ಜಿ ಆಹ್ವಾನ

Facebook
X
WhatsApp
Telegram


ಬೀದರ: 09.ಜನವರಿ.25 :-  ಬೀದರ ಜಿಲ್ಲೆಯ 2024-25ನೇ ಸಾಲಿಗೆ ಶೇ 75% ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರ ವ್ಯಕ್ತಿಗಳಿಗೆ ಇಲಾಖೆಯಿಂದ ಜಾರಿ ಇರುವ ಬ್ಯಾಟರಿ ಚಾಲಿತ ವಿಲ್ಹ್ಚೇರ ಯೋಜನೆಯಡಿ ಅರ್ಹರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ಸೌಲಭ್ಯ ಪಡೆಯಲು ಆನ್‌ಲೈನ್

Suvidha Website URL https://suvidha.karnataka.gov.in ಪೋರ್ಟಲ್‌ನಲ್ಲಿ

ದಿನಾಂಕ: 21-01-2025 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಸರ್ಕಾರದಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಪಡೆದಿರಬಾರದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ: ವಿಕಲಚೇತನರ ಯು.ಡಿ.ಐ.ಡಿ ಕಾರ್ಡ್. ಬಿ.ಪಿ.ಎಲ್ ಪಡಿತರ ಚೀಟಿ. ಜಾತಿ ಮತ್ತು ಆದಾಯ ರೂ. 2.00 ಲಕ್ಷಗಳಿಗಿಂತ ಕಡಿಮೆ ಇರಬೇಕು ಪ್ರಮಾಣ ಪತ್ರ. ತಶೀಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರ. ಆಧಾರ ಕಾರ್ಡ್. ಸ್ವಯಂ ಘೋಷಣಾ ಪತ್ರ ಹಾಗೂ ಭಾವ ಚಿತ್ರ 02

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8073451071, 8970965959, ಎಲ್ಲಾ ತಾಲ್ಲೂಕ ಎಂ.ಆರ್.ಡಬ್ಲೂö್ಯ ಬೀದರ (9880801991), ಭಾಲ್ಕಿ (9741166275), ಬಸವಕಲ್ಯಾಣ ಹುಮನಾಬಾದ –(9611221445), (8432574070), ಔರಾದ ಬಿ (9611590832), (924231284) ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!