15/06/2025 2:18 AM

Translate Language

Home » ಲೈವ್ ನ್ಯೂಸ್ » ಮಹಿಳೆ ಕಾಣೆ: ಪತ್ತೆಗಾಗಿ ಮನವಿ

ಮಹಿಳೆ ಕಾಣೆ: ಪತ್ತೆಗಾಗಿ ಮನವಿ

Facebook
X
WhatsApp
Telegram


01ಡಿ 25. ಬೀದರ :- ಚಿಟ್ಟಗುಪ್ಪಾ ತಾಲ್ಲೂಕಿನ ಕಾರಪಾಕಪಳ್ಳಿ ಗ್ರಾಮದ ನಿವಾಸಿಯಾದ ಸುಧಾ ರಾಜಕುಮಾರ ಮೋರೆ (25) ಇವರು ದಿನಾಂಕ: 29-10-2024 ರಂದು ತನ್ನ ತಂಗಿಯ ಊರಿಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವಳು ಮರಳಿ ಮನೆಗೆ ಬರದೇ ಕಾಣೆಯಾಗಿರುತ್ತಾಳೆ.


ಈ ಕಾಣೆಯಾಗಿರುವ ಮಹಿಳೆ 5 ಫೀಟ್ 2 ಇಂಚ್ ಎತ್ತರ ಇದ್ದು, ದುಂಡುಮುಖ ಸದೃಢ ಮೈಕಟ್ಟು, ಗೋಧಿ ಮೈಬಣ್ಣ ಇದ್ದು, ಮೈಮೇಲೆ ಬಿಳಿ ಬಣ್ಣದ ಟಾಪ ಮತ್ತು ಒಂದು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಇವಳು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾಳೆ.

ಈ ಕಾಣೆಯಾದ ಮಹಿಳೆ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಪೊಲೀಸ ಕಂಟ್ರೋಲ ರೂಂ ಬೀದರ ದೂ. ನಂ (08482-226704),

ಪೊಲೀಸ ನೀರಿಕ್ಷಕರು ಚಿಟಗುಪ್ಪಾ ವೃತ್ತ ಮೊಬೈಲ್ ನಂ (9480803434),

ಪೊಲೀಸ ಉಪನಿರೀಕ್ಷಕರು ಬೇಮಳಖೇಡಾ ಠಾಣೆ ಮೊಬೈಲ್ ನಂ (9480803454),

ಬೇಮಳಖೇಡಾ ಪೊಲೀಸ ಠಾಣೆ ಮೊಬೈಲ್ ನಂ (08482-200449) ಗೆ ಸಂಪರ್ಕಿಸುವoತೆ ಬೇಮಳಖೇಡಾ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು, ಅರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!