19 ಡಿಸೆಂಬರ್24 ಬೀದರ್:- ಬೀದರ್ ಜಿಲ್ಲೆಯ ಪರಿಶಿಷ್ಟ ಪಂಗಡ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಡ್ರೋನ್ ಆಧಾರಿತ ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ ಯುವಕ ಯುವತಿಯರಿಗೆ ಡ್ರೋನ್ ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿ ರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ್ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ಪಡೆಯಬೇಕು ಅಂದ್ರೆ ಕೆಲವ ಷರತ್ತುಗಳ ವಿವರ:
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ 18 ವರ್ಷ, ಗರಿಷ್ಠ 45 ವರ್ಷ ಮೀರತಕ್ಕದ್ದಲ್ಲ. ಅಭ್ಯರ್ಥಿಯ ಕುಟುಂಬದ ಆದಾಯ ರೂ.2.50 ಲಕ್ಷ ರೂಪೇಶ್ ಮೀರಬಾರದು.
ಮೊಟ್ಟಮೊದಲು ಅಭ್ಯರ್ಥಿಯು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ಮೂಲನಿವಾಸಿ ಮತ್ತು ಅಲೆಮಾರಿ/ಅರೆ ಅಲೆಮಾರಿ ಮತ್ತು ಸೂಕ್ಷö್ಮ / ಅತಿ ಸೂಕ್ಷö್ಮ ಪರಿಶಿಷ್ಟ ಪಂಗಡದ ಸಮುದಾಯದ ಯುವಕ/ಯುವತಿಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ತರಬೇತಿಯ ನೋಂದಣಿ ಸಮಯದಲ್ಲಿ ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡನ್ನು ಸಲ್ಲಿಸತಕ್ಕದ್ದು.
ಐಕೆ ಆಗಿರುವ ಅಭ್ಯರ್ಥಿಗಳಿಗೆ ತರಭೇತಿ ಎಲ್ಲ ಖರ್ಚು ವೆಚ್ಚ . ಮತ್ತು ತರಬೇತಿ ನೀಡುವ ಸ್ಥಳಕ್ಕೆ ಬರುವ ಪ್ರಯಾಣ ವೆಚ್ಚವನ್ನು ಇಲಾಖೆಯಿಂದ ಭರಿಸುವುದಿಲ್ಲ. ತರಬೇತಿ ಅವಧಿಯಲ್ಲಿ ಯಾವುದೇ ಶಿಷ್ಯವ್ಭೆತನ ನೀಡುವುದಿಲ್ಲ.
ಅರ್ಹರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಅರ್ಜಿಯನ್ನು ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಡಿಸೆಂಬರ್.23 ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊನೆಯ ದಿನಾಂಕ 23-12-2024ರ ಒಳಗಾಗಿ ಈ ಕಛೇರಿಗೆ ಸಲ್ಲಿಸಲು ಕೋರಿದೆ.
ತರಬೇತಿ ಪಡೆಯಬೇಕು ಎನ್ನುವ ಆಸಕ್ತಿ ಇದ್ದರೆ ಆದಷ್ಟು ಬೇಗ ಅರ್ಜೆ ಸಲ್ಲಿಸಿ…