ಹಾಕಿಯಲ್ಲಿ, ಕಳೆದ ರಾತ್ರಿ ಓಮನ್‌ನ ಮಸ್ಕತ್‌ನಲ್ಲಿ ನಡೆದ ಮಹಿಳಾ ಜೂನಿಯರ್ ಏಷ್ಯಾ ಕಪ್ 2024 ಚಾಂಪಿಯನ್‌ಶಿಪ್ ಅನ್ನು ಭಾರತ ಗೆದ್ದಿದೆ.
ಪ್ರಶಸ್ತಿ ಹಣಾಹಣಿಯಲ್ಲಿ, ಭಾರತ ತಂಡವು ಚೀನಾವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಸೋಲಿಸಿ ತನ್ನ ಪ್ರಶಸ್ತಿಯನ್ನು ಯಶಸ್ವಿಯಾಗಿ ಕಾಯ್ದುಕೊಂಡಿತು.
ಭಾರತದ ಗೋಲ್‌ಕೀಪರ್ ನಿಧಿ ಪೆನಾಲ್ಟಿ ಶೂಟೌಟ್‌ನಲ್ಲಿ ಮೂರು ನಿರ್ಣಾಯಕ ಸೇವ್‌ಗಳನ್ನು ಮಾಡಿದರು, ಆದರೆ ಶೂಟೌಟ್‌ನಲ್ಲಿ ಸಾಕ್ಷಿ ರಾಣಾ, ಇಶಿಕಾ ಮತ್ತು ಸುನೆಲಿತಾ ಟೊಪ್ಪೊ ಭಾರತದ ಪರವಾಗಿ ಗೋಲು ಗಳಿಸಿದರು.
ಇದಕ್ಕೂ ಮೊದಲು, ಚೀನಾ ಪರ ಜಿನ್‌ಜುವಾಂಗ್ ತಾನ್ ಆರಂಭಿಕ ಗೋಲು ಗಳಿಸಿದರು ಮತ್ತು ಕನಿಕಾ ಸಿವಾಚ್ ಭಾರತದ ಪರ ಮೂರನೇ ಕ್ವಾರ್ಟರ್‌ನಲ್ಲಿ ಸಮಬಲ ಸಾಧಿಸಿದರು.
ನಿಗದಿತ ಸಮಯದಲ್ಲಿ 1-1 ಡ್ರಾ ನಂತರ, ಪ್ರಶಸ್ತಿ ಹಣಾಹಣಿಯು ಶೂಟೌಟ್‌ಗೆ ಹೋಯಿತು. ಹಾಕಿ ಇಂಡಿಯಾ ಪ್ರತಿ ಆಟಗಾರನಿಗೆ 2 ಲಕ್ಷ ರೂಪಾಯಿ ಮತ್ತು ಅವರ ಪ್ರಯತ್ನ ಮತ್ತು ಅದ್ಭುತ ಗೆಲುವಿಗಾಗಿ ಪ್ರತಿ ಸಹಾಯಕ ಸಿಬ್ಬಂದಿಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.
ಭಾರತದ ದೀಪಿಕಾ ಸೆಹ್ರಾವತ್ 12 ಗೋಲುಗಳೊಂದಿಗೆ ಪಂದ್ಯಾವಳಿಯ ಅಗ್ರ ಸ್ಕೋರರ್ ಶ್ರೇಯಾಂಕವನ್ನು ಪಡೆದರು. ಕಳೆದ ವರ್ಷ ಕೊರಿಯಾ ಗಣರಾಜ್ಯವನ್ನು ಸೋಲಿಸುವ ಮೂಲಕ ಭಾರತವು ತನ್ನ ಚೊಚ್ಚಲ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.