ಬೆಂಗಳೂರು.12.ಅ: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೇ ಆದರೆ, ಇದರ ಹಿಂದೆ ಯಾರು ಇದ್ದಾರೆ ಎಂಬ ಸತ್ಯವೂ ಹೊರಬರಬೇಕಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಮಾನ್ಯ ಸಿದ್ಧರಾಮಯ್ಯ ಅವರು ನೋಡೋಣ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸ್ಟಿಂಗ್ ಆಪರೇಷನ್ ವಿಚಾರವನ್ನು ಪ್ರಸ್ತಾಪಿಸಿದರು. ಈ ಕಾರ್ಯಾಚರಣೆಯ ಹಿಂದೆ ಯಾರಿದ್ದಾರೆ ಎಂಬುದು ತಿಳಿಯಬೇಕು ಎಂದು ಅಭಿಪ್ರಾಯಪಟ್ಟರು. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಸ್ಟಿಂಗ್ ಆಪರೇಷನ್ ಆರೋಪದ ಕುರಿತು ತನಿಖೆ ನಡೆಯಲಿದೆಯೇ? ಈ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆಗಳು ಇದೀಗ ಎದುರಾಗಿವೆ. ಆದರೆ, ತನಿಖೆ ಅಥವಾ ಮುಂದಿನ ಕ್ರಮಗಳ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಇದೇ ವೇಳೆ ತಮ್ಮ ವಯಸ್ಸು ಹಾಗೂ ರಾಜಕೀಯ ಜೀವನದ ಬಗ್ಗೆಯೂ ಸಿದ್ದರಾಮಯ್ಯ ಮಾತನಾಡಿದರು. ನನಗೆ 80 ವರ್ಷವಾಗಿದೆ ಎಂದು ರಾಜಕೀಯದಿಂದ ಹಿಂದೇಟು ಹಾಕುವುದಿಲ್ಲ. ಉಗ್ರಪ್ಪ ಅವರಿಗೆ ರಾಜಕೀಯದಲ್ಲಿ ಮುಂದುವರಿಯಲು ಇನ್ನೂ 10 ವರ್ಷಗಳಿವೆ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.
ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬರು ‘ಇನ್ನೊಮ್ಮೆ ಸಿಎಂ ಆಗಬೇಕು’ ಎಂದು ಕೂಗಿದಾಗ, ಅದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸಿಎಂ ಮಾತ್ರ ಬೇಡಪ್ಪ’ ಎಂದು ಉತ್ತರಿಸಿದರು.
ಮುಂದುವರಿದು ರಾಜ್ಯಸಭೆ ಸದಸ್ಯತ್ವದ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ರಾಹುಲ್ ಗಾಂಧಿ ಅವರು ತಮ್ಮನ್ನು ರಾಜ್ಯಸಭೆಗೆ ಬರುವಂತೆ ಆಹ್ವಾನಿಸಿದ್ದರು ಎಂದು ತಿಳಿಸಿದರು.
‘ನನ್ನದು ಈಗ ಚುನಾವಣೆಗೆ ನಿಲ್ಲುವ ವಯಸ್ಸಾ? ರಾಹುಲ್ ಗಾಂಧಿ ರಾಜ್ಯಸಭೆಗೆ ಬರುವಂತೆ ಹೇಳಿದ್ದರು. ಆದರೆ, ನನಗೆ ವಯಸ್ಸಾಗಿದೆ. ದೆಹಲಿಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದೆ. ಬಳಿಕ ನನ್ನನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯನನ್ನಾಗಿ ಮಾಡಿದರು’ ಎಂದು ವಿವರಿಸಿದರು.
ಒಂದೆಡೆ ಸ್ಟಿಂಗ್ ಆಪರೇಷನ್ ಕುರಿತು ಸತ್ಯ ಹೊರಬರಬೇಕು ಎಂಬ ಹೇಳಿಕೆ, ಮತ್ತೊಂದೆಡೆ ರಾಜ್ಯಸಭೆ ಆಹ್ವಾನ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತು ನೀಡಿದ ಪ್ರತಿಕ್ರಿಯೆಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದಿವೆ.





Any questions related to ಸ್ಟಿಂಗ್ ಆಪರೇಷನ್ ಇದರ ಹಿಂದೆ ಯಾರು ಇದ್ದಾರೆ ? ಸಿದ್ದರಾಮಯ್ಯ !?