Home » ಲೈವ್ ನ್ಯೂಸ್ » ಇನ್ಮುಂದೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ: (DEAD BODY) ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಬಂದ್! ಆರೋಗ್ಯ ಸಚಿವ: ಯು ಟಿ ಖಾದರ್

ಇನ್ಮುಂದೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ: (DEAD BODY) ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಬಂದ್! ಆರೋಗ್ಯ ಸಚಿವ: ಯು ಟಿ ಖಾದರ್

Govt of Karnataka New Bill Introduce  Private Hospitals (Hospital Bill Policy) 2026

ಬೆಂಗಳೂರು.12.ಅ: ರಾಜ್ಯ ಸರ್ಕಾರ ದೇಶದಲ್ಲಿ ಮೊಟ್ಟ ಮೊದಲಿಗೆ ಈ ಒಂದು ಹೊಸ ಕಾನೂನು ತರುತಿದೆ ರೋಗಿಯ ಮೃತದೇಹವನ್ನು ಇಟ್ಟುಕೊಂಡು ಹಣಕ್ಕಾಗಿ ಸತಾಯಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಮೃತದೇಹ ಹಸ್ತಾಂತರಕ್ಕೆ ಹೊಸ ಪಾಲಿಸಿ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೀಗಾಗಿ ಇನ್ಮೇಲೆ ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಬಂದ್ ಅಂದು ಆರೋಗ್ಯ ಸಚಿವ ಯು ಟಿ ಖಾದರ್ ತಿಳಿಸಿದರು.

ಇನ್ಮುಂದೆ ಬಿಲ್ ಕಟ್ಟಿದ್ರೆ ಮಾತ್ರ ಡೆಡ್‌ಬಾಡಿ ಕೊಡ್ತೀವಿ ಅಂತಾ ಯಾವುದೇ ಆಸ್ಪತ್ರೆ ಹೇಳುವ ಹಾಗಿಲ್ಲ, ಡೆಡ್‌ಬಾಡಿ ಹಿಡಿದು ಬಿಲ್ ವಸೂಲಿಗೆ ಮುಂದಾದ್ರೆ ಆ ಆಸ್ಪತ್ರೆ ಮೇಲೆ ಕೇಸ್ ಬೀಳಲಿದೆ ಎಂದು ವರದಿಯಾಗಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಹೊಸ ರೂಲ್ಸ್ ತರಲು ಮುಂದಾಗಿದ್ದು, ಸಾವಿನ ಬಳಿಕವೂ ಮೃತದೇಹ ಕೊಡಲು ಬಿಲ್ ಷರತ್ತು ಹಾಕಬಾರದು ಎಂದು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನಿಯಮ ತರಲಿದೆ. ಮೃತದೇಹದ ವಿಚಾರದಲ್ಲಿ ಆಸ್ಪತ್ರೆಗಳ ನಿಯಮಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ದು, ಖಾಸಗಿ ಆಸ್ಪತ್ರೆಗಳ ವಿರುದ್ಧದ ದೂರುಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಯುಟಿ ಖಾದರ್, ‘ಈ ಬಗ್ಗೆ ಪಾಲಿಸಿ ಮಾಡಬೇಕು. ನಮಗೆ ಎರಡ್ಮೂರು ಆಲೋಚನೆ ಇದೆ, ಈಗ ಕೆಲವು ಕಡೆ ಹೀಗೆ ಆಗ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದ್ರೂ ತೀರಿ ಹೋದ್ರೆ ದುಡ್ಡು ಕಟ್ಟಿ ಮೃತದೇಹ ಪಡೆಯಬೇಕು, ದುಡ್ಡು ಇಲ್ಲ ಅಂತ ಪರದಾಡುವ ಕುಟುಂಬಕ್ಕೆ ಆರ್ಥಿಕ ಹೊರೆ ಇದು, ದುಡ್ಡಿಗಾಗಿ ಮೃತದೇಹ ಇಟ್ಟಕೊಂಡು ಸತಾಯಿಸುವ ಕೆಲಸ ಆಗಬಾರದು ಎಂದು ಹೇಳಿದರು.

2007-18 ಎರಡೂ ಸಲ ಕಾನೂನು ಬಂದಿದ್ರೂ ಸಹ ಸಮರ್ಪಕ ಅನುಷ್ಠಾನವಾಗಿಲ್ಲ, ನಾನು ಇದನ್ನ 100% ಅನುಷ್ಠಾನ ಮಾಡುತ್ತೇನೆ. ಇದನ್ನ ತರಲು ಹೊಸ ಕಾನೂನು ರೂಪಿಸಲು ಮುಂದಾಗಿದ್ದೇನೆ. ಖಾಸಗಿ ಆಸ್ಪತ್ರೆಗಳು ಮೃತದೇಹ ನೀಡದಿದ್ರೆ ರೋಗಿಯ ಸಂಬಂಧಿಕರು ಏನು ಮಾಡಬೇಕು? ಮುಂದೆ ಯಾವ ಕ್ರಮ ತಗೆದುಕೊಳ್ಳಬೇಕು? ಡಿಎಚ್‌ಒಗಳು ಕೆಲವರು ಕೊಡುತ್ತಾರೆ, ಇನ್ನು ಹಲವು ಸರಿ ಆಸ್ಪತ್ರೆಗಳು ಈ ಮಾತು ಕೇಳುವುದಿಲ್ಲ, ಹೀಗಾಗಿ ಇದಕ್ಕೆ ನಾವು ಹೊಸ ಕಾನೂನು ರೂಪಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

2018ರಲ್ಲಿ ಶ್ಯೂರಿಟಿ ಪಡೆದು ಬಾಡಿ ನೀಡುವ ಕಾನೂನು ಇದೆ, ಇದು ಸರಿಯಾಗುವುದಿಲ್ಲ, 2018ರ ಕಾನೂನು ಬದಲಾವಣೆ ಮಾಡಬೇಕಿದೆ. 2028ರ ಕಾನೂನಿನಲ್ಲಿ ಖಾಸಗಿ ಆಸ್ಪತ್ರೆಗಳು ಬಿಲ್ ನೀಡಿಲ್ಲ ಅಂದ್ರೆ ಕೇಸ್ ಹಾಕಬಹುದು ಅಂತ ಇದೆ. ಹೀಗಾಗಿ ಕೇಸ್ ಕಾನೂನು ಯಾಕೆ ಅಂತ ಸಾಲ ಮಾಡಿ ಜನರು ದುಡ್ಡು ಕಟ್ಟುತ್ತಿದ್ದಾರೆ.

2007ರ ಕಾನೂನಿನಲ್ಲಿ ಯಾವುದೇ ಆಸ್ಪತ್ರೆಗಳು ಬಾಡಿ ಇಟ್ಟಿಕೊಳ್ಳುವ ಹಾಗಿಲ್ಲ ಅಂತಿದೆ, ಆದ್ರೆ 2018 ಕಾನೂನಿನಲ್ಲಿ ಬಾಡಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಆದ್ರೆ ಶ್ಯೂರಿಟಿ ನೀಡಬೇಕು ಅಂತಿದೆ. ನಂತರ ರೋಗಿಗಳು ಹಣ ನೀಡದೆ ಇದ್ರೆ ಕೇಸ್ ಹಾಕಬಹುದು ಅಂತಿದೆ. ಇದರಿಂದ ಯಾರೇ ಬಂದ್ರೂ ಕೋರ್ಟ್ ಕೇಸ್ ಬೇಡ ಅಂತ ಹಣ ಕಟ್ಟುತ್ತಿದ್ದಾರೆ, ಹೀಗಾಗಿ ಈ ಕಾನೂನಿನ ಬದಲಾವಣೆ ಮಾಡಬೇಕಿದೆ ಎಂದು ಖಾದರ್ ಹೇಳಿದರು.

ಆಸ್ಪತ್ರೆಯ ಸಂಘಗಳು ಮತ್ತು ಎಲ್ಲರ ಜೊತೆ ಚರ್ಚೆ ಮಾಡಿ ಹೊಸ ಕಾನೂನು ರೂಪಿಸಲು ಪ್ಲಾನ್ ಮಾಡ್ತಾ ಇದ್ದೀವಿ ಎಂದು ಯುಟಿ ಖಾದರ್ ಹೇಳಿದರು.

Author

ಪ್ರಮುಖ ಸುದ್ದಿ

Stock market

Astrology