Home » ಲೈವ್ ನ್ಯೂಸ್ » ಹಿಂದುಳಿದ ಜಾತಿಯವರು ಶೀಘ್ರ ಪ್ಯಾರಿಶಿಸ್ಟ್ ಜಾತಿ ಪಟ್ಟಿಯಿಂದ ಹೊರಕ್ಕೆ!

ಹಿಂದುಳಿದ ಜಾತಿಯವರು ಶೀಘ್ರ ಪ್ಯಾರಿಶಿಸ್ಟ್ ಜಾತಿ ಪಟ್ಟಿಯಿಂದ ಹೊರಕ್ಕೆ!

ಚಿತ್ರದುರ್ಗ.11.ಅ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಸಾಂವಿಧಾನಿಕವಾಗಿ ಸೇರ್ಪಡೆಯಾಗಿರುವ, ಇತರ ಹಿಂದುಳಿದ ವರ್ಗಗಳ ಜಾತಿಗಳಾದ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಪ್ಯಾರಿಶಿಸ್ಟ್ ಜಾತಿ ಪಟ್ಟಿಯಿಂದ ಹೊರಹಾಕುವ ಕಾಲ ಸಮೀಪಿಸುತ್ತಿದೆ. ಈ ಸಂಬಂಧ ವರದಿ ಸಲ್ಲಿಸಲು ಉಚ್ಚೆ ನ್ಯಾಯಾಲಯ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಈಚೆಗೆ ಸೂಚನೆ ನೀಡಿದೆ’ ಎಂದು ಛಲವಾದಿ ಗುರುಪೀಠದ ಪೀಠಾಧಿಪತಿ ಬಸವನಾಗಿದೇವ ಸ್ವಾಮೀಜಿ ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳಿಗೆ ಸ್ಥಾನವಿಲ್ಲ. ಆದರೆ, ಸಂವಿಧಾನ ವಿರೋಧಿಯಾಗಿ ಈ 4 ಸಮುದಾಯಗಳು ಸೇರಿ ಹೋಗಿವೆ. ಇದನ್ನು ಖಂಡಿಸಿ ನಾವು 2019ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದೆವು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ 4 ವಾರದೊಳಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಮನವಿ ಸಲ್ಲಿಸಲು ಆದೇಶ ನೀಡಿತು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಸ್ಪೃಶ್ಯ ಜಾತಿಗೆ ಸೇರಿದ ಲಂಬಾಣಿ, ಭೋವಿ, ಕೊರಚ, ಕೊರಮರು ಎಸ್‌ಸಿ ಪಟ್ಟಿಯಲ್ಲಿ ಇರುವಂತಿಲ್ಲ. 2020ರಲ್ಲಿ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ ಶೀಘ್ರ ವರದಿ ನೀಡುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಆದೇಶಿಸಿತ್ತು. ಜೊತೆಗೆ ಈ 4 ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡಲು ಶಿಫಾರಸು ಮಾಡುವಂತೆ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿತ್ತು’ ಎಂದರು.

‘ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆಯೋಗಕ್ಕೆ ಪತ್ರ ಬರೆದು ಈ ನಾಲ್ಕು ಜಾತಿಗಳನ್ನು ಎಸ್‌ಸಿ ಪಟ್ಟಿಯಲ್ಲೇ ಉಳಿಸಿಕೊಳ್ಳುವುದಾಗಿ ತಿಳಿಸಿತ್ತು. ಇದರ ವಿರುದ್ಧ ನಾವು ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಿದ್ದೆವು. ಹೈಕೋರ್ಟ್‌ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಹೇಳಿತ್ತು’ ಎಂದು ಡಾ.ಅಂಬೇಡ್ಕರ್‌ ಪರಿಶಿಷ್ಟ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಬಿ.ಎಸ್‌.ಪ್ರಸನ್ನಕುಮಾರ್ ತಿಳಿಸಿದರು.

‘ಮುಂದೆ ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಸುಪ್ರೀಂ ಕೋರ್ಟ್‌ ಆದೇಶ ಜಾರಿಗೊಳಿಸಲು ಮನವಿ ಮಾಡಿದೆವು. ಅದರ ಅನುಸಾರ ಶೀಘ್ರ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸೆ. 30ರಂದು ಹೈಕೋರ್ಟ್‌ ಸೂಚನೆ ನೀಡಿದೆ. ಆಯೋಗ ವರದಿ ಸಲ್ಲಿಸಿದ ಕೂಡಲೇ ಈ 4 ಜಾತಿಗಳು ಎಸ್‌ಸಿ ಪಟ್ಟಿಯಿಂದ ಹೊರಬರಲಿವೆ’ ಎಂದು ಹೇಳಿದರು.

Source: ಪ್ರಜಾವಾಣಿ

Author

ಪ್ರಮುಖ ಸುದ್ದಿ

Stock market

Astrology