ಬೀದರ್, ಸೆಪ್ಟೆಂಬರ್ 04 : “ದೀನ್ ದಯಾಳ್ ಸ್ಪರ್ಶ (SPARSH) ಯೋಜನೆ” ಅಡಿಯಲ್ಲಿ ವಿದ್ಯಾರ್ಥಿವೇತನ ನೀಡಲು ಅಂಚೆ ಇಲಾಖೆಯು 6ನೇ ತರಗತಿಯಿಂದ 9ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಬೀದರ್ ಅಂಚೆ ಅಧೀಕ್ಷಕರಾದ ವಿ.ಎಸ್.ಚಿತ್ತಕೋಟೆ ತಿಳಿಸಿದ್ದಾರೆ.
ಸ್ಪರ್ಶ (SPARSH – “Scholarship for Promotion of Aptitude and Research in Stamps as a Hobby”) (ಹವ್ಯಾಸವಾಗಿ ಅಂಚೆ ಚೀಟಿ ಸಂಗ್ರಹಣೆ ಉತ್ತೇಜಿಸುವ ಮತ್ತು ಸಂಶೋಧಿಸುವ ವಿದ್ಯಾರ್ಥಿವೇತನ) ಆಗಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಅಂಚೆ ಚೀಟಿ ಸಂಗ್ರಹಣೆ ಹವ್ಯಾಸವನ್ನು ಸುಸ್ಥಿರ ರೀತಿಯಲ್ಲಿ ಉತ್ತೇಜಿಸುವುದು ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವಾಗಿದ್ದು, ಇದು ಅವರ ಶೈಕ್ಷಣಿಕ ಪಠ್ಯಕ್ರಮಕ್ಕೆ ಪೂರಕವಾಗಿರುತ್ತದೆ. ಈ ಹವ್ಯಾಸವು ವಿದ್ಯಾರ್ಥಿಗಳಿಗೆ ಮಾನಸಿಕ ಶಮನ ಮತ್ತು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಈ ಯೋಜನೆಯಡಿ, 2025-26ನೇ ಶೈಕ್ಷಣಿಕ ಸಾಲಿನಲ್ಲಿ 60% ಅಂಕಗಳನ್ನು ಪಡೆದಿರುವ ಮತ್ತು ಫಿಲಾಟಲಿ ಡೆಪಾಸಿಟ್ ಖಾತೆ/ಫಿಲಾಟಲಿ ಕ್ಲಬ್ ಸದಸ್ಯತ್ವ ಹೊಂದಿ, ಫಿಲಾಟಲಿಯನ್ನು ಹವ್ಯಾಸವಾಗಿ ಮುಂದುವರಿಸುತ್ತಿರುವ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ ರೂ.6,000/- ವಿದ್ಯಾರ್ಥಿವೇತನ ನೀಡಲಾಗುವುದು. ಫಿಲಾಟಲಿ ರಸಪ್ರಶ್ನೆ (Philatelic Quiz) ಸ್ಪರ್ಧೆಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಫಿಲಾಟಲಿ ಯೋಜನೆಯನ್ನು (Project) ಯಶಸ್ವಿಯಾಗಿ ಪೂರ್ಣಗೊಳಿಸಬೇಕಾಗುತ್ತದೆ.
ಹಂತ-1ರ ಫಿಲಾಟಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು/ಅಂಚೆ ಮೂಲಕ ಕಳುಹಿಸಲು ಕೊನೆಯ ದಿನಾಂಕ 10.09.2026. ಕರ್ನಾಟಕದ ಎಲ್ಲಾ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಈ ವಿದ್ಯಾರ್ಥಿವೇತನ ಯೋಜನೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು www.indiapost.gov.in ವೆಬ್‌ಸೈಟ್ ಹಾಗೂ ಕರ್ನಾಟಕ ಸರ್ಕಲ್ ಪೋರ್ಟಲ್‌ಗೆ ಭೇಟಿ ನೀಡಿ, ಅಥವಾ ಬೀದರ್ ಅಂಚೆ ಅಧೀಕ್ಷಕರು-585401 ಇಲ್ಲಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ವಿದ್ಯಾರ್ಥಿವೇತನ’ಕೆ ಅರ್ಜಿ ಆಹ್ವಾನ?